ಮಂಜೇಶ್ವರ:ಒಂಬತ್ತು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಂಜೇಶ್ವರದ ವಿವಾಹಿತ ಮಹಿಳೆ ಯುವಕನೊಂದಿಗೆ ಉತ್ತರ ಪ್ರದೇಶದ ಲಖ್ನೋದಲ್ಲಿ ಪತ್ತೆಯಾಗಿದ್ದಾರೆ.
ಡಿವೈಎಸ್ಪಿ ಪಿ.ಕೆ ಸುಧಾಕರನ್ ನೇತೃತ್ವದ ತನಿಖಾ ತಂಡ ಕಾರ್ಯಾಚರಣೆ ನಡೆಸಿ ಜೋಡಿಯನ್ನು ಉತ್ತರಪ್ರದೇಶದಿಂದ ಕಾಸರಗೋಡಿಗೆ ಕರೆ ತಂದಿದ್ದಾರೆ.
ಪಾವೂರು ಮೂಲದ ಸದ್ಯ ಮಂಜೇಶ್ವರದ ಫ್ಲಾಟ್ನಲ್ಲಿ ವಾಸಿಸುತ್ತಿರುವ ಝಾಹಿದಾ (33) ಉತ್ತರ ಪ್ರದೇಶದ ಯುವಕನೊಂದಿಗೆ ಪತ್ತೆಯಾದ ಮಹಿಳೆಯಾಗಿದ್ದಾರೆ.
ಝಾಹಿದಾ ಒಂಬತ್ತು ತಿಂಗಳ ಹಿಂದೆ ತನ್ನ 12 ವರ್ಷದ ಮಗನನ್ನು ಶಾಲೆಗೆ ಬಿಟ್ಟು ಬಂದಿದ್ದರು.ನಂತರ ಮಂಗಳೂರಿನ ಆಯುರ್ವೇದ ಆಸ್ಪತ್ರೆಗೆ ಹೋಗಿ ಬರುವುದಾಗಿ ತಿಳಿಸಿ ಹೊರಗಡೆ ಹೋಗಿದ್ದು ಮತ್ತೆ ತಿರುಗಿ ಬರಲೇ ಇಲ್ಲ.
ಸಂಬಂಧಿಕರ ದೂರಿನ ಮೇರೆಗೆ ಪೊಲೀಸರು ಸೈಬರ್ ಸೆಲ್ ಸಹಾಯದಿಂದ ನಡೆಸಿದ ತನಿಖೆಯಲ್ಲಿ ಝಾಹಿದಾಗೆ ಬಂದ ಕರೆ ಆಧರಿಸಿ ಪತ್ತೆ ಹಚ್ಚಿದ್ದರು.
ಜೋಡಿ ಮುಂಬೈನಲ್ಲಿದೆ ಎಂಬ ಮಾಹಿತಿ ಮೇರೆಗೆ ಮಂಜೇಶ್ವರಂ ಪೊಲೀಸರು ಮುಂಬೈನಲ್ಲಿ ಒಂದು ವಾರ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ.ಪೊಲೀಸರು ಮುಂಬೈಗೆ ಆಗಮಿಸಿರುವ ಮಾಹಿತಿ ಪಡೆದು ಜೋಡಿ ಲಖನೌ ಪ್ರವೇಶಿಸಿದ್ದರು.
ಪೊಲೀಸ್ ತನಿಖೆಯಲ್ಲಿ ವಿಳಂಬ ಮಾಡುತ್ತಿದೆ ಎಂದು ಕುಟುಂಬಿಕರು ಮುಖ್ಯಮಂತ್ರಿ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ಇದರೊಂದಿಗೆ ತನಿಖೆಯನ್ನು ತೀವ್ರಗೊಳಿಸುವಂತೆ ಗೃಹ ಇಲಾಖೆ ಪೊಲೀಸರಿಗೆ ಸೂಚನೆ ಬಂದಿತ್ತು. ನಂತರ ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಹುಡುಕಾಟ ನಡೆಸಲಾಗಿತ್ತು.ಇಂದು ಜೋಡಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಝಾಹಿದಾಗೆ 12 ವರ್ಷದ ಮಗನಿದ್ದ.ಕುಟುಂಬಸ್ಥರು ಮತ್ತು ಮಗ ಝಾಹಿದ ಊರಿಗೆ ಬಂದಾಗ ಕಣ್ಣೀರಿನಿಂದ ಸ್ವಾಗತಕ್ಕೆ ಮುಂದಾಗಿದ್ದರು.ಆದರೆ ಆಕೆ ಕುಟುಂಬದ ಜೊತೆ ತೆರಳಲು ಮುಂದಾಗಿಲ್ಲ ಎನ್ನಲಾಗಿದೆ.