ಮಂಗಳೂರು;ಯುವಕನಿಗೆ ಸುಟ್ಟು ಕೊಲೆ, ವಿದ್ಯುತ್ ಸ್ಪರ್ಶ ಎಂದು ಬಿಂಬಿಸಲು ಯತ್ನ

ಮಂಗಳೂರು;ಯುವಕನೋರ್ವನಿಗೆ ಸುಟ್ಟು ಕೊಲೆಗೈದ ಘಟನೆ ನಗರದ ಮುಳಿಹಿತ್ಲುವಿನಲ್ಲಿ ಶನಿವಾರ ಸಂಭವಿಸಿದೆ.

ಉತ್ತರ ಭಾರತದ ಕಾರ್ಮಿಕ ಗಜ್ಞಾನ್‌ ಯಾನೆ ಜಗು ಕೊಲೆಯಾದವನು.ಮುಳಿಹಿತ್ಲು ಜಂಕ್ಷನ್‌ನಲ್ಲಿ ಇರುವ ಜನರಲ್‌ ಸ್ಟೋರ್‌ನ ಮಾಲಕ ತೌಸಿಫ್ ಹುಸೈನ್‌ (32)ಬಂಧಿತ ಆರೋಪಿ.

ಮೃತ ಗಜ್ಞಾನ್‌ ಆರೋಪಿ ತೌಸಿಫ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ.ಶನಿವಾರ ಬೆಳಗ್ಗೆ ಕ್ಷುಲ್ಲಕ ಕಾರಣಕ್ಕೆ ಗಜ್ಞಾನ್‌ನನ್ನು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಕೊಲೆ ಮಾಡಿ ತಪ್ಪಿಸಿಕೊಳ್ಳಲು ಅಂಗಡಿಯ ಸುತ್ತಮುತ್ತಲಿನ ಸಾರ್ವಜನಿಕರಿಗೆ ವಿದ್ಯುತ್‌ ಸ್ಪರ್ಶವಾಗಿದೆ ಎಂದು ಸುಳ್ಳು ಹೇಳಿದ್ದಾನೆ.

ಈ ಕುರಿತು ಮಂಗಳೂರು ದಕ್ಷಿಣ ಪೊಲೀಸರು ತನಿಖೆಯನ್ನು ಆರಂಭಿಸಿ ವಿಚಾರಿಸಿದಾಗ ಕೊಲೆ ಪ್ರಕರಣವೆಂದು ಪತ್ತೆಹಚ್ಚಿದ್ದಾರೆ ಎನ್ನಲಾಗಿದೆ.

ಟಾಪ್ ನ್ಯೂಸ್