ಮಂಗಳೂರು;ಯುವಕನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರತ್ಯುಶ್ ಎಂಬವರ ಮೇಲೆ ಸಂಜಯ್ ಎಂಬಾತ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
Free Fire ಎಂಬ ಮೊಬೈಲ್ ಆನ್ ಲೈನ್ ಗೇಮ್ ನಲ್ಲಿ ಸೋಲಿಸಿದ ವಿಚಾರವಾಗಿ, ಪ್ರತ್ಯುಶ್ ಮೇಲೆ ಆರೋಪಿಗೆ ದ್ವೇಷವಿದ್ದು, ಪ್ರತ್ಯುಶ್ ಮಂಗಳೂರು ನಗರದ ಜೆಪ್ಪು ಬಪ್ಪಾಲ್ ನ ತನ್ನ ಮನೆಯಿಂದ ನಡೆದುಕೊಂಡು ನಂದಿಗುಡ್ಡೆ ಕಡೆಗೆ ಹೋಗುತ್ತಿದ್ದಾಗ, ಜೆಪ್ಪು ಬಪ್ಪಾಲ್ ರಸ್ತೆಯಲ್ಲಿರುವ ಧ್ವಜ ಸ್ಥಂಭದ ಬಳಿ ಸ್ಕೂಟರ್ ನಲ್ಲಿ ಕುಳಿತ್ತಿದ್ದ ಸಂಜಯ್, ಪ್ರತ್ಯುಶ್ ಗೆ ಅಕ್ರಮವಾಗಿ ತಡೆದು ನಿಲ್ಲಿಸಿ, ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿ ಪ್ಯಾಂಟಿನ ಕಿಸೆಯಿಂದ ಮಾರಕಾಯುಧವಾದ ಚೂರಿಯನ್ನು ತೆಗೆದು ಪ್ರತ್ಯುಶ್ ಗೆ
ಎದೆಗೆ ಗುರಿ ಇಟ್ಟು ಬಲವಾಗಿ ತಿವಿಯಲು ಬಂದಾಗ, ಪ್ರತ್ಯುಶ್ ತನ್ನ ಬಲ ಕೈಯನ್ನು ಅಡ್ಡ ಹಿಡಿದಿದ್ದು,ಈ ವೇಳೆ ಏಟು ಬಲಕೈ ಹೆಬ್ಬೆರಳಿನ ಹಸ್ತದ ಬಳಿ ತಾಗಿದೆ.ಇನ್ನೊಂದು ಬಾರಿ ತಿವಿಯಲು ಯತ್ನಿಸಿದಾಗ
ಎಡ ಪಕ್ಕೆಯ ಬಳಿ ತಾಗಿದೆ ಎಂದು ಆರೋಪಿಸಲಾಗಿದೆ.
ಬಳಿಕ ಪ್ರತ್ಯುಶ್ ಬೊಬ್ಬೆ ಹಾಕಿದ್ದು ಈ ವೇಳೆ ಪಕ್ಕದಲ್ಲಿದ್ದವರು ಬಂದು ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.ಈ ಕುರಿತು
ಪ್ರತ್ಯುಶ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.