ಮಂಗಳೂರು; ಚಪ್ಪಲಿ ಕಾಣೆಯಾಗಿದೆ ಎಂದು ಪೊಲೀಸರನ್ನು ಕರೆಸಿದ ಯುವಕ!

ಮಂಗಳೂರು;ಯುವಕನೊಬ್ಬ ತನ್ನ ಚಪ್ಪಲಿ ಕಾಣೆಯಾಗಿದೆ ಎಂದು 112 ಸಹಾಯವಾಣಿ ನಂಬರಿಗೆ ಕರೆ ಮಾಡಿ ಪೊಲೀಸರನ್ನು ಕರೆಸಿದ ಘಟನೆ ನಗರದಲ್ಲಿ ನಡೆದಿದೆ.

ಶರವು ದೇವಸ್ಥಾನದ ಸಮೀಪದ ಸಭಾಂಗಣಕ್ಕೆ ಆಗಮಿಸಿದ್ದ ಯುವಕ ಚಪ್ಪಲಿಯನ್ನು ಹೊರಗೆ ಬಿಟ್ಟಿದ್ದು ವಾಪಾಸ್ ಬಂದಾಗ ಅಲ್ಲಿರಲಿಲ್ಲ. ಹೀಗಾಗಿ 112 ನಂಬರಿಗೆ ಕರೆ ಮಾಡಿ ದೂರು ದಾಖಲಿಸಿದ್ದಾನೆ.

ಈ ದೂರನ್ನು ಪರಿಶೀಲಿಸುವಂತೆ ಬಂದರು ಠಾಣೆಗೆ ಸಂದೇಶ ಬಂದಿತ್ತು.ಹೀಗಾಗಿ ಕರ್ತವ್ಯದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.

ಯುವಕ ಚಪ್ಪಲಿ ಕಳವಾಗಿರುವ ವಿಷಯ ಹೇಳಿದಾಗ
ಪೊಲೀಸರು ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆಗ ಸಭಾಂಗಣಕ್ಕೆ ಮಾರುಕಟ್ಟೆಯಿಂದ ಸಾಮಗ್ರಿ ಹಾಕಲು ಬಂದಿದ್ದ ವ್ಯಕ್ತಿಯೊಬ್ಬ ಚಪ್ಪಲಿ ಹಾಕಿಕೊಂಡು ಹೋಗಿರುವುದು ಗಮನಕ್ಕೆ ಬಂದಿದೆ.

ಈ ಬಗ್ಗೆ ಠಾಣೆಗೆ ಬಂದು ದೂರು ನೀಡುವಂತೆ ಯುವಕನಲ್ಲಿ ಪೊಲೀಸರು ತಿಳಿಸಿದ್ದು, ಯುವಕ ದೂರು ನೀಡದೆ ತೆರಳಿದ್ದಾನೆ ಎಂದು ತಿಳಿದು ಬಂದಿದೆ.

ಟಾಪ್ ನ್ಯೂಸ್