ಮಂಗಳೂರು; ಸ್ಕೂಟರ್ ಅಪಘಾತ, ಇಬ್ಬರು ಯುವಕರು ಮೃತ್ಯು

ಮಂಗಳೂರು:ವಿದ್ಯುತ್ ಕಂಬಕ್ಕೆ ನಿಯಂತ್ರಣ ತಪ್ಪಿದ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟ ಘಟನೆ ಪದವಿನಂಗಡಿ ಬಳಿ ನಡೆದಿದೆ.

ಪಚ್ಚನಾಡಿ‌ ಮೂಲದ ಪವನ್ ಮತ್ತು ಚಿರಾಗ್ ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ.

ಸವಾರನ ನಿಯಂತ್ರಣ ತಪ್ಪಿ ಸ್ಕೂಟರ್ ವಿದ್ಯತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಮತ್ತೋರ್ವ ಆಸ್ಪತ್ರೆಗೆ ರವಾನಿಸುವ ಸಂದರ್ಭ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಮಂಗಳೂರು ಪೊಲೀಸರು ಭೇಟಿ ನೀಡಿದ್ದಾರೆ.

ಅಪಘಾತ ನಡೆದಿರುವುದನ್ನು ಗಮನಿಸಿದ ಖಾಸಗಿ ಬಸ್ ಚಾಲಕ ಹಾಗೂ ನಿರ್ವಾಹಕ ಇಬ್ಬರನ್ನು ತಕ್ಷಣವೇ ಬಸ್ ನಲ್ಲೇ ಆಸ್ಪತ್ರೆಗೆ ರವಾನಿಸಿದ್ದಾರೆ ಎನ್ನಲಾಗಿದೆ.

ಟಾಪ್ ನ್ಯೂಸ್

ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಮೀಲಾದ್ ರ್ಯಾಲಿಯಲ್ಲಿ ತೆರಳುತ್ತಿದ್ದ ಯುವಕರು

ಕಾಪು;ಮೀಲಾದ್ ರ್ಯಾಲಿಯಲ್ಲಿ ಸಾಗುತ್ತಿದ್ದ ಯುವಕರ ಗುಂಪು ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ