ಮಂಗಳೂರು;ರಾತ್ರಿ ವೇಳೆ ಅನುಮಾನಸ್ಪದವಾಗಿ ವರ್ತಿಸುತ್ತಿದ್ದ
ಯುವಕನನ್ನು ಮಂಗಳೂರು ಉತ್ತರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಬಗ್ಗೆ ವರದಿಯಾಗಿದೆ.
ಕಸಬಾ ಬೆಂಗ್ರೆಯ ನೌಶಾದ್ (30) ಎಂಬಾತನಿಗೆ ವಶಕ್ಕೆ ಪಡೆಯಲಾಗಿದೆ.
ಗುರುವಾರ ರಾತ್ರಿ 1 ಗಂಟೆಯ ವೇಳೆಗೆ ಉತ್ತರ ಠಾಣಾ
ಪೊಲೀಸರು ನಗರದ ಕೆ.ಎಸ್.ರಾವ್ ರಸ್ತೆಯ ಸಿಟಿ ಸೆಂಟರ್ ಬಳಿ ರೌಂಡ್ಸ್‌ನಲ್ಲಿದ್ದಾಗ ನೌಶಾದ್ (30) ಎಂಬಾತ ಪೊಲೀಸ್ ವಾಹನವನ್ನು ಕಂಡು ಕತ್ತಲಿನಲ್ಲಿ ಓಡಲು ಪ್ರಯತ್ನಿಸಿದ್ದ.ಈ ವೇಳೆ ಪೊಲೀಸರು ಆತನಿಗೆ ವಶಕ್ಕೆ ಪಡೆದುಕೊಂಡಿದ್ದಾರೆ.
ಈತ ಅಂಗಡಿ ಕಳ್ಳತನ ಅಥವಾ ಇನ್ಯಾವುದೋ ಕೃತ್ಯ ನಡೆಸಲು ಹೊಂಚು ಹಾಕುತ್ತಿರುವ ಬಗ್ಗೆ ಸಂಶಯ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.