ಕಾಸರಗೋಡು:ಬೈಕ್ ಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಪತ್ನಿ ಮೃತಪಟ್ಟು, ಪತಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿಯ ಉಪ್ಪಳ ಬಳಿ ಬುಧವಾರ ನಡೆದಿದೆ.
ಮಂಗಳೂರು ಕೊಟ್ಟಾರ ಚೌಕಿಯ ನಳಿನಾಕ್ಷಿ (65) ಮೃತಪಟ್ಟವರು.ಅವರ ಪತಿ ಪ್ರಭಾಕರ ಘಟನೆಯಲ್ಲಿ ಗಾಯಗೊಂಡಿದ್ದಾರೆ.
ಕಾಸರಗೋಡಿನಲ್ಲಿ ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬೈಕ್ ನಲ್ಲಿ ಮಂಗಳೂರು ಕಡೆಗೆ ಮರಳುತ್ತಿದ್ದಾಗ ಬೈಕ್ ಗೆ ಅತೀ ವೇಗದಿಂದ ಬಂದ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ.ಅಪಘಾತದ ರಭಸಕ್ಕೆ ಇಬ್ಬರು, ರಸ್ತೆಗೆಸೆಲ್ಪಯಟ್ಟಿದ್ದು ಗಂಭೀರ ಗಾಯಗೊಂಡಿದ್ದ ನಳಿನಾಕ್ಷಿ ರವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಪರಾರಿಯಾದ ವಾಹನ ಪಿಕಪ್ ವ್ಯಾನ್ ಆಗಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.ರಸ್ತೆ ಬದಿಯ ಮನೆ,ಕಟ್ಟಡದಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.