ಮಂಗಳೂರು; ಗಾಂಜಾ ದಂಧೆ, ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಸೇರಿ ಒಟ್ಟು 10 ಮಂದಿಯ ಬಂಧನ

ಮಂಗಳೂರು:ಗಾಂಜಾ ಸೇವನೆ ಆರೋಪದ ಮೇಲೆ ವೈದ್ಯರು, ವೈದ್ಯಕೀಯ ಮತ್ತು ದಂತ ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.

ಕೇರಳ ಮೂಲದ ಡಾ ಸಮೀರ್ (32), ಡಾ. ನಾದಿಯಾ ಸಿರಾಜ್ (24), ತಮಿಳುನಾಡಿನ ಡಾ ಮಣಿಮಾರನ್ ಮುತ್ತು (28), ಆಂಧ್ರದ ಡಾ ವರ್ಷಿಣಿ ಪ್ರತಿ (26),ಚಂಡಿಘಡ,ಪಂಜಾಬ್ ನ ಡಾ ಭಾನು ಧಾಹಿಯಾ (27), ಚಂಡಿಘಡದ ಡಾ ರಿಯಾ ಚಡ್ಡಾ (22), ದೆಹಲಿಯ ಡಾ. ಕ್ಷಿತಿಜ್ ಗುಪ್ತಾ (25), ಮಹಾರಾಷ್ಟ್ರದ ಡಾ ಇರಾ ಬಸಿನ್ (23) ಮತ್ತು ಬಂಟ್ವಾಳ ಮಾರಿಪಳ್ಳದ ಮೊಹಮ್ಮದ್ ರೌಫ್ ಗೌಸ್ (34) ಎಂದು ಪೊಲೀಸರು ವಿವರಗಳನ್ನು ನೀಡಿದ್ದಾರೆ.

ನೀಲ್ ಕಿಶೋರಿಲಾಲ್ ರಾಮ್ ಜಿ ಶಾ ಎಂಬಾತನನ್ನು ಮೊದಲು ಬಂಧಿಸಲಾಗಿದ್ದು, ಈತ ಯುಕೆಯ ಪ್ರಜೆಯಾಗಿದ್ದು, ಎನ್ ಆರ್ ಐ ಕೋಟಾದಲ್ಲಿ ಡೆಂಟಲ್ ವಿದ್ಯಾರ್ಥಿಯಾಗಿದ್ದ. ಕಳೆದ ಹದಿನೈದು ವರ್ಷಗಳಿಂದಲೂ ವಿದ್ಯಾಭ್ಯಾಸ ಮಾಡುತ್ತಿದ್ದು, ಆತನಿಗೆ ಶಿಕ್ಷಣ ಇನ್ನೂ ಪೂರ್ಣ ಗೊಳಿಸಲು ಸಾಧ್ಯವಾಗಿಲ್ಲ. ಗಾಂಜಾ ಪೆಡ್ಲರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿಸಿದ್ದಾರೆ.

ಒಂಬತ್ತು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಟಾಪ್ ನ್ಯೂಸ್