ಮಂಗಳೂರು ಲಾಡ್ಜ್ ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಪ್ರಕರಣ; ಪೊಲೀಸ್ ತನಿಖೆಯಲ್ಲಿ ಮಹತ್ವದ ಅಂಶ ಬಹಿರಂಗ…

ಮಂಗಳೂರು:ಮಂಗಳೂರು ಲಾಡ್ಜ್ ನಲ್ಲಿ ದಂಪತಿ & ಮಕ್ಕಳು ಆತ್ಮಹತ್ಯೆ ಕೇಸ್ ನ‌ ತನಿಖೆಯಲ್ಲಿ ಪೊಲೀಸರಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ.

ಮೈಸೂರು ವಿಯನಗರದ ವಾಣಿ ವಿಲಾಸ ನಿವಾಸಿ 48 ವರ್ಷದ ದೇವೇಂದ್ರ ಅವರು ಪತ್ನಿ ನಿರ್ಮಲಾ ಹಾಗೂ ಅವಳಿ ಮಕ್ಕಳಾದ ಚೈತ್ರಾ ಮತ್ತು ಚೈನತ್ಯಗೆ ವಿಷ ನೀಡಿ ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದೇವೆಂದ್ರ ಕುಟುಂಬ ಮಾರ್ಚ್ 27 ರಂದು ಮಂಗಳೂರಿಗೆ ಆಗಮಿಸಿದೆ.ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಕರುಣಾ ರೆಸಿಡೆನ್ಸಿ ಎನ್ನುವ ಲಾಡ್ಜ್ ನಲ್ಲಿ ರೂಂ ಮಾಡಿ ಉಳಿದುಕೊಂಡಿದ್ದಾರೆ. ಮಾರ್ಚ್ 29 ರಂದು ರೂಂನ್ನು ಒಂದು ದಿನ ಬದಲಾಯಿಸಿದ್ದಾರೆ. ಆದರೆ ರೂಂ ಖಾಲಿ ಮಾಡಿಲ್ಲ.ನಿನ್ನೆ ಲಾಡ್ಜ್ ಸಿಬ್ಬಂದಿ ಅನುಮಾನಗೊಂಡು ರೂಂನ್ನು ತೆರೆದು ನೋಡಿದಾಗ ಅಲ್ಲಿ ಇಡೀ ಕುಟುಂಬ ಸಾವನ್ನಪ್ಪಿರುವುದು ಕಂಡು ಬಂದಿದೆ.

ಬಳಿಕ ಲಾಡ್ಜ್​ ಸಿಬ್ಬಂದಿ ಬಂದರು ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಬಂದ ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್ ಜೈನ್ ಪರಿಶೀಲನೆ ನಡೆಸಿದ್ದಾರೆ.

ಇನ್ನು ತನಿಖೆ ಬಳಿಕ ಮೊದಲು ದೇವೇಂದ್ರ ಪತ್ನಿ ಮತ್ತು ಮಕ್ಕಳಿಗೆ ಆಹಾರದಲ್ಲಿ ವಿಷ ನೀಡಿ ನಂತರ ತಾನು ನೇಣಿಗೆ ಶರಣಾಗಿದ್ದಾನೆ ಎನ್ನುವುದು ಗೊತ್ತಾಗಿದೆ.

ದೇವೇಂದ್ರ ಅವರು ಸಾಯುವ ಮುನ್ನ ಡೆತ್​ನೋಟ್ ಬರೆದಿಟ್ಟಿದ್ದಾರೆ.ಸಾಲಗಾರರ ಕಾಟದಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅವರು ಬರೆದಿದ್ದಾರೆ.ಮೃತದೇಹವನ್ನು ಕುಟುಂಬಸ್ಥರಿಗೆ ಇದೀಗ ಹಸ್ತಾಂತರಿಸಲಾಗಿದೆ. ಕುಟುಂಬವೊಂದರ ದಾರುಣ ಅಂತ್ಯ ನಿಜಕ್ಕೂ ಖೇದಕರವಾದುದು.

ಟಾಪ್ ನ್ಯೂಸ್

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ ಉದ್ವಿಗ್ನತೆ, ನಿಷೇಧಾಜ್ಞೆ ಜಾರಿ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ ಹಣ ಪಡೆಯಲು ಯತ್ನಿಸಿದ ಮಹಿಳೆ; ವಿಷಯ ಗೊತ್ತಾಗಿ ಪತಿಯೇ ಪತ್ನಿಯ ವಿರುದ್ಧ ದೂರು ಕೊಟ್ಟ!

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ

ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆ; ಮಕ್ಕಳು ಆಟವಾಡುವಾಗ ಆಕಸ್ಮಿಕವಾಗಿ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ

ನವದೆಹಲಿ; ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿರುವ ಶಾಕಿಂಗ್ ಘಟನೆ ರಾಷ್ಟ್ರ

Developed by eAppsi.com