ಮಂಗಳೂರು; ಜ್ಯುವೆಲ್ಲರಿ ಅಂಗಡಿಗೆ ನುಗ್ಗಿ ಕೊಲೆ ಪ್ರಕರಣ, ಪೊಲೀಸರಿಗೆ ಮಹತ್ವದ ಸುಳಿವು ಲಭ್ಯ

ಮಂಗಳೂರು;ಜ್ಯುವೆಲ್ಲರಿ ಅಂಗಡಿಯ ಸಿಬ್ಬಂದಿ ರಾಘವೇಂದ್ರ ಆಚಾರ್ಯರನ್ನು ಚೂರಿಯಿಂದ ಇರಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಆರೋಪಿಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಆರೋಪಿಯ ಪತ್ತೆಗಾಗಿ ಸ್ಥಳೀಯ ಕಟ್ಟಡಗಳ ಸಿಸಿ ಕೆಮರಾ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ಆರೋಪಿ ಎಲ್ಲಾ ಚಲನವಲನ ಅರಿತು ಪೂರ್ವ ನಿಯೋಜಿತವಾಗಿ ಕೃತ್ಯ ನಡೆಸಿರುವುದು ಕಂಡು ಬಂದಿದೆ.

ಅಂಗಡಿ ಮಾಲಕರು ಪ್ರತೀದಿನ ಊಟಕ್ಕೆ ಹೋಗುವ ಸಮಯವನ್ನು ಆರೋಪಿ ಅರಿತುಕೊಂಡು ಸಿಬ್ಬಂದಿ ರಾಘವೇಂದ್ರ ಮಾತ್ರ ಇರುವುದನ್ನು ದೃಢಪಡಿಸಿ ಕೃತ್ಯ ನಡೆಸಿರುವುದು ಕಂಡು ಬಂದಿದೆ.

ಕೊಲೆ ವೇಳೆ ಮಾಸ್ಕ್, ಕ್ಯಾಪ್‌ ಮತ್ತು ಜರ್ಕಿಯನ್ನು ದುಷ್ಕರ್ಮಿ ಧರಿಸಿರುವುದು ತಿಳಿದು ಬಂದಿದೆ. ಇದಲ್ಲದೆ
ಅಂಗಡಿಯಲ್ಲಿದ್ದ 60,000 ರೂ. ಮೌಲ್ಯದ 3 ಚಿನ್ನದ ಸರಗಳನ್ನು ದರೋಡೆ ಮಾಡಲಾಗಿದೆ ಎನ್ನಲಾಗಿದೆ.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com