ಮಂಗಳೂರು; ದುಬೈ ಮಾರ್ಕೆಟ್ ನಲ್ಲಿ ಅಂಗಡಿ ಮಾಲಕನಿಗೆ ಹಲ್ಲೆ

ಮಂಗಳೂರು;ದುಬೈ ಮಾರ್ಕೆಟ್‌ನಲ್ಲಿ ಮೊಬೈಲ್ ರಿಪೇರಿ ವಿಚಾರದಲ್ಲಿ ಮೊಬೈಲ್ ಅಂಗಡಿ ಮಾಲಕನಿಗೆ ಗುಂಪೊಂದು ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.

ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆಂದು ತಿಳಿದು ಬಂದಿದೆ.

ಮಂಗಳವಾರ ರಾತ್ರಿ ಬಂದ ಗ್ರಾಹಕನೋರ್ವ ಪವರ್ ಬ್ಯಾಂಕ್‌ ರಿಪೇರಿಗೆಂದು ಬಂದಿದ್ದು, ಅಂಗಡಿ ಮಾಲಕ ನಾವು ಮೊಬೈಲ್ ಹೊರತು ಬೇರೆ ಯಾವುದನ್ನೂ ರಿಪೇರಿ ಮಾಡುವುದಿಲ್ಲ ಎಂದು ಹೇಳಿದ್ದಾನೆ.ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ.

ಬಳಿಕ ಗ್ರಾಹಕ ಅಂಗಡಿ ಮಾಲಕನಿಗೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.ಇದಕ್ಕೆ ಪ್ರತಿರೋಧ ವ್ಯಕ್ತ ಪಡಿಸಿದಕ್ಕೆ ಕೋಪಗೊಂಡ ಗ್ರಾಹಕ ತನ್ನ ಗೆಳೆಯರನ್ನು ಕರೆಸಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

ಟಾಪ್ ನ್ಯೂಸ್