ಮಂಗಳೂರು;ಡ್ರಗ್ಸ್ ದಂಧೆಯಲ್ಲಿ ಬಂಧಿತ ಇಬ್ಬರು ವೈದ್ಯರನ್ನು ವಜಾ ಮಾಡಿ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ ಆಸ್ಪತ್ರೆ

ಮಂಗಳೂರು;ಡ್ರಗ್ಸ್ ದಂಧೆ ಹಿನ್ನೆಲೆ ಬಂಧನದ ಬೆನ್ನಲ್ಲೇ ಖಾಸಗಿ ಮೆಡಿಕಲ್‌ ಕಾಲೇಜು ಹಾಗೂ ಆಸ್ಪತ್ರೆಯ ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದ್ದು,ಇಬ್ಬರು ವೈದ್ಯರನ್ನು ವಜಾ ಮಾಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಹಾಗೂ ವೈದ್ಯರು ಸೇರಿದಂತೆ ಒಟ್ಟು ಹದಿನೈದು ಮಂದಿಯನ್ನು ಬಂಧಿಸಲಾಗಿತ್ತು.

ಕೆಎಂಸಿ ಆಸ್ಪತ್ರೆ ಅತ್ತಾವರದ ಮೆಡಿಕಲ್‌ ಆಫೀಸರ್‌ ಡಾ.ಸಮೀರ್‌ ಮತ್ತು ಕೆಎಂಸಿಯ ಮೆಡಿಕಲ್‌ ಸರ್ಜನ್‌ ಡಾ.ಮಣಿಮಾರನ್‌ ಮುತ್ತು ಎನ್ನುವವರು ವಜಾಗೊಂಡ ವೈದ್ಯರಾಗಿದ್ದಾರೆ.

ಡಾ. ಕಿಶೋರಿ ಲಾಲ್‌, ಡಾ. ನದೀಯಾ ಸಿರಾಜ್‌, ಡಾ. ವರ್ಷಿಣಿ, ಡಾ.ರಿಯಾ, ಡಾ.ಇರಾ ಬಾಸಿನ, ಡಾ. ಕ್ಷಿತಿಜ್‌, ಡಾ. ಹರ್ಷ ಕುಮಾರ್‌ ಇವರು ಅಮಾನತಿಗೊಳಗಾದ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.

ಟಾಪ್ ನ್ಯೂಸ್