ಮಂಗಳೂರು; ಮೋದಿ ಕಾರ್ಯಕ್ರಮದ ಹಿನ್ನೆಲೆ, ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್, ಇಬ್ಬರ ಮೇಲೆ ಕೇಸ್ ದಾಖಲು

ಮಂಗಳೂರು;ಪ್ರಧಾನಿ ಕಾರ್ಯಕ್ರಮದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹವಾಗಿ ಪ್ರಚಾರ ಮಾಡಿದ ಆರೋಪದಲ್ಲಿ ಇಬ್ಬರ ಮೇಲೆ‌ ಪೊಲೀಸ್ ಕೇಸ್ ದಾಖಲಿಸಲಾಗಿದೆ ಎಂದು‌ ಮಂಗಳೂರು ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.

ಎರಡು ಪ್ರಕರಣಗಳಲ್ಲಿ ಒಂದು‌ ಪೋಟೋವನ್ನು ಆಕ್ಷೇಪಾರ್ಹವಾಗಿ ಮಾರ್ಪಡು‌ ಮಾಡಲಾಗಿದೆ. ಇನ್ನೊಂದು ಕಾರ್ಯಕ್ರಮಕ್ಕೆ‌ ಸಂಬಂಧಿಸಿದಂತೆ ಕೆಲವು ಕಡೆ ಗೊಂದಲವುಂಟು ಮಾಡುವ ಸಂದೇಶ ರವಾನಿಸಲಾಗಿದೆ. ಇಂತಹ ಎರಡು ಪ್ರಕರಣಗಳ ಮೇಲೆ ಕೇಸ್ ದಾಖಲಿಸಿದ್ದೇವೆ ಎಂದು ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.

ಇನ್ನು ನಮ್ಮ‌ ಪೊಲೀಸರ ತಂಡ ಎಲ್ಲಾ ವಾಟ್ಸಾಪ್ ಗ್ರೂಪ್ ಗಳ ಮೇಲೆ ನಿಗಾವಹಿಸಿದೆ. ಲತಪ್ಪು ಕಂಡು ಬಂದಲ್ಲಿ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.

ಇದೀಗ ಎರಡು ಕೇಸ್ ಗೆ ಸಂಬಂಧಿಸಿ ಸಂಬಂಧ ಪಟ್ಟವರ ವಶಕ್ಕೆ ಪಡೆಯುವ ಕಾರ್ಯ ನಡೆಯುತ್ತಿದೆ.ಈ ಕುರಿತು ಹೆಚ್ಚಿನ ಮಾಹಿತಿ ಮುಂದಕ್ಕೆ‌ ನೀಡುವುದಾಗಿ ಕಮಿಷನರ್ ಹೇಳಿದ್ದಾರೆ.

ಟಾಪ್ ನ್ಯೂಸ್