ಮಂಗಳೂರು; ಬೈಕ್ ಅಪಘಾತ, ಕಾಲೇಜು ವಿದ್ಯಾರ್ಥಿ ಮೃತ್ಯು

ಮಂಗಳೂರು: ಬೈಕ್ ನಿಯಂತ್ರಣ ತಪ್ಪಿ ಅಂಡರ್‌ಪಾಸ್ ಫುಟ್‌ಪಾತ್‌ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ವಿದ್ಯಾರ್ಥಿ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ನಗರದ ಹೊರವಲಯದ ಪಡೀಲ್ ಅಂಡರ್ ಪಾಸ್‌ ಬಳಿ ಗುರುವಾರದಂದು ನಡೆದಿದೆ.

ಬಜಾಲ್ ಸಮೀಪದ ಪಲ್ಲಕೆರೆಯ ನಿವಾಸಿ ಭವಿನ್ ರಾಜ್(20) ಮೃತಪಟ್ಟಿರುವ ಯುವಕ.

ಘಟನೆಯಲ್ಲಿ ಗಾಡ್ವಿನ್(19) ಮತ್ತು ಆಶಿತ್ (17) ಎಂಬವರು ಗಾಯಗೊಂಡಿದ್ದಾರೆ.

ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ಓದುತ್ತಿದ್ದ ಭವಿನ್‌ ರಾಜ್ ಗುರುವಾರ ಮಧ್ಯಾಹ್ನ ತನ್ನ ಗೆಳೆಯರ ಜತೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಪಡೀಲ್ ಅಂಡರ್‌ಪಾಸ್ ಬಳಿ ಬೈಕ್ ನಿಯಂತ್ರಣ ತಪ್ಪಿ ಅಂಡರ್‌ಪಾಸ್ ಫುಟ್‌ಪಾತ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಈ ಕುರಿತು ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್