ಮಂಗಳೂರು:ಸ್ಕೂಟರ್ ಗೆ ಖಾಸಗಿ ಬಸ್ ಢಿಕ್ಕಿ ಹೊಡೆದು ಐದು ವರ್ಷದ ಬಾಲಕ ಮೃತಪಟ್ಟು, ತಾಯಿ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಹಾರ್ದಿಕ್ ಮೃತ ಬಾಲಕ. ಬಾಲಕನ ತಾಯಿ ಸ್ವಾತಿ ಗಂಭೀರ ಗಾಯಗೊಂಡಿದ್ದಾರೆ.
ಸ್ವಾತಿ ತಮ್ಮ ಮಗ ಹಾರ್ದಿಕ್‌ನೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಬೆಂದೂರ್‌ವೆಲ್ ಬಳಿ ಖಾಸಗಿ ಬಸ್‌ವೊಂದು ಓವರ್‌ಟೇಕ್ ಮಾಡುವ ಭರದಲ್ಲಿ ಇನ್ನೊಂದು ಬಸ್‌ಗೆ ಢಿಕ್ಕಿಯಾಗಿದೆ.ಈ ವೇಳೆ ಬಸ್ ದ್ವಿಚಕ್ರ ವಾಹನಕ್ಕೆ ತಾಗಿ ತಾಯಿ ಮತ್ತು ಮಗ ಕೆಳಕ್ಕೆ ಬಿದ್ದಿದ್ದಾರೆ. ಬಾಲಕ ಬಸ್‌ನ ಚಕ್ರದಡಿಗೆ ಸಿಲುಕಿ ಮೃತಪಟ್ಟಿದ್ದಾನೆ.ಸ್ವಾತಿ ಸ್ಥಿತಿ ಗಂಭೀರವಾಗಿದೆ.
ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.