ಮಂಗಳೂರು; ಗುದದ್ವಾರದಲ್ಲಿ ಚಿನ್ನ ಕಳ್ಳ ಸಾಗಣೆ; ಮಹಿಳೆಯ ಬಂಧನ

ಮಂಗಳೂರು: ಗುದದ್ವಾರದಲ್ಲಿ ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದ ಮಹಿಳೆಯನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.

ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 20.41 ಲಕ್ಷ ರೂ.ಮೌಲ್ಯದ ಚಿನ್ನವನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ದುಬೈನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮಹಿಳೆಯ ತಪಾಸಣೆ ವೇಳೆ ಡಿಟೆಕ್ಟರ್ ನಲ್ಲಿ ಶಬ್ದ ಬಂದಿದ್ದು, ಪರಿಶೀಲಿಸಿದಾಗ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದು ಧೃಡಪಟ್ಟಿದೆ.

ಎರಡು ಗೋಳಾಕಾರದ ಕ್ಯಾಪ್ಸುಲ್ ಮಾದರಿಗಳಲ್ಲಿ ಪೇಸ್ಟ್ ರೂಪದ ಚಿನ್ನವನ್ನು ಗುದದ್ವಾರದಲ್ಲಿ ಬಚ್ಚಿಟ್ಟುಕೊಂಡು ಮಹಿಳೆ ಸಾಗಣೆ ಮಾಡುತ್ತಿದ್ದರು ಎನ್ನಲಾಗಿದೆ.

ಮಹಿಳೆಯ ಬಳಿ 24 ಕ್ಯಾರೆಟ್‌ನ 345 ಗ್ರಾಂ ಚಿನ್ನ ಪತ್ತೆಯಾಗಿದ್ದು, ಇದರ ಮೌಲ್ಯ 20,41,650 ರೂ.ಎಂದು ಹೇಳಲಾಗಿದೆ.

ಟಾಪ್ ನ್ಯೂಸ್