ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಲ್ಪದರಲ್ಲೇ ತಪ್ಪಿದ ಭಾರೀ ದುರಂತ

ಮಂಗಳೂರು;ಟೇಕಾಫ್ ಆಗಬೇಕಿದ್ದ ವಿಮಾನಕ್ಕೆ ಹಕ್ಕಿಯೊಂದು ಢಿಕ್ಕಿ ಹೊಡೆದ ಪರಿಣಾಮ ಟೇಕಾಫ್ ಕ್ಯಾನ್ಸಲ್ ಮಾಡಿ ಪ್ರಯಾಣ ರದ್ದುಗೊಳಿಸಿದ ಘಟನೆ ಇಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಮಂಗಳೂರಿನಿಂದ ದುಬೈಗೆ ಪ್ರಯಾಣಕ್ಕೆ ಇಂಡಿಗೋ ವಿಮಾನವು ಇಂದು ಬೆಳಿಗ್ಗೆ ರನ್ ವೇನಲ್ಲಿ ಸಾಗುತ್ತಿತ್ತು.ಈ ವೇಳೆ ರನ್ ವೇನಲ್ಲಿ ವಿಮಾನದ ರೆಕ್ಕೆಗೆ ಹಕ್ಕಿ ಢಿಕ್ಕಿ ಹೊಡೆದಿದೆ.

ಅಪಾಯದ ಸೂಚನೆ ಅರಿತು ಪೈಲಟ್ ಎಟಿಸಿಗೆ ಮಾಹಿತಿ ನೀಡಿ ಟೇಕಾಫ್ ಕ್ಯಾನ್ಸಲ್ ಮಾಡಿ ರನ್ ವೇನಿಂದಲೇ ವಿಮಾನವನ್ನು ವಾಪಾಸ್ ಮಾಡಿದ್ದಾರೆ.ಇದರಿಂದ ಸಂಭವಿಸಬಹುದಾದ ಅನಾಹುತ ತಪ್ಪಿದೆ.

ಬಳಿಕ ಇನ್ನೊಂದು ವಿಮಾನದ ವ್ಯವಸ್ಥೆ ಮಾಡಲಾಗಿದೆ.ವಿಮಾನ ಬೆಂಗಳೂರಿನಿಂದ ಆಗಮಿಸಿದ ಬಳಿಕ ಆ ವಿಮಾನದ ಮೂಲಕ ಪ್ರಯಾಣಿಕರನ್ನು ದುಬೈಗೆ ಕಳುಹಿಸಿ ಕೊಡಲಾಗಿದೆ.

ಟಾಪ್ ನ್ಯೂಸ್