ಮಂಗಳೂರು;ಪ್ರಧಾನಿ ಮೋದಿ ನಾಳೆ ಮಂಗಳೂರಿಗೆ ಆಗಮನದ ಹಿನ್ನೆಲೆ ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ನಗರದಲ್ಲಿ ಬಿಗಿ ಭದ್ರತೆ,ಪೊಲೀಸ್ ಕಣ್ಗಾವಲು ಮುಂದುವರಿದಿದೆ.ಇದಲ್ಲದೆ ಪ್ರಧಾನಿ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಹಲವು ಸೂಚನೆ ಪೊಲೀಸರು ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಎಡಿಜಿಪಿ(ADGP) ಅಲೋಕ್ ಕುಮಾರ್,ಮೋದಿ ಕಾರ್ಯಕ್ರಮದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲುಆಗಮಿಸುವವರು ಲೈಟರ್,ಮ್ಯಾಚ್‌ಬಾಕ್ಸ್, ಭಿತ್ತಿಪತ್ರ,ಬಾಟಲಿ,ಕಪ್ಪು ಬಟ್ಟೆ,ಕರಪತ್ರ ತರಬಾರದು ಎಂದು ಹೇಳಿದ್ದಾರೆ.
ಇನ್ನು ಕಾರ್ಯಕ್ರಮಕ್ಕೆ ಬರುವವರು ಕಪ್ಪು ಟಿಶರ್ಟ್ ಧರಿಸಬಾರದು.ಅದನ್ನು ದುರುಪಯೋಗಪಡಿಸುವ ಸಾಧ್ಯತೆ ಇದೆ ಎಂದು ಈ ಮೂಲಕ ಸೂಚನೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಹೆಲಿಪ್ಯಾಡ್‌ನಿಂದ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸಾರ್ವಜನಿಕರು ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಅನುಕೂಲವಾಗುವಂತೆ ಕ್ರಮ ವಹಿಸಲಾಗಿದೆ. ತುರ್ತು ಮಾರ್ಗಗಳು ಸೇರಿದಂತೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.