ಮಂಗಳೂರು; ಈಜಲು ತೆರಳಿದ ಇಬ್ಬರು ಯುವಕರು ನೀರುಪಾಲು

ಮಂಗಳೂರು: ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಯುವಕರಿಬ್ಬರು ನಾಪತ್ತೆಯಾಗಿದ್ದು, ಓರ್ವನ ಮೃತದೇಹ ಪತ್ತೆಯಾದ ಘಟನೆ ಭಾನುವಾರ ಸಂಜೆ ಅಳಪೆ ಪಡ್ಪು ನಡೆದಿದೆ.

ಅಳಪೆ ಸ್ಥಳೀಯ ನಿವಾಸಿಗಳಾದ ವರುಣ್ (26) ಮತ್ತು ವೀಕ್ಷಿತ್ (26) ನಾಪತ್ತೆಯಾದವರು ಎಂದು ತಿಳಿದು ಬಂದಿದೆ.

ಅಳಪೆಯ ಪಡ್ಪು ಬಳಿ ಇರುವ ನೀರು ತುಂಬಿರುವ ಕೆರೆಯಂತಿರುವ ಹೊಂಡದಲ್ಲಿ ಈಜಲು ಹೋಗಿದ್ದ ಆರು ಮಂದಿ ಪೈಕಿ ಇಬ್ಬರು ನಾಪತ್ತೆಯಾಗಿದ್ದಾರೆ.ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಓರ್ವನ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಟಾಪ್ ನ್ಯೂಸ್