ಮಂಗಳೂರು; ಅನೈತಿಕ ಪೊಲೀಸ್ ಗಿರಿ ಪ್ರಕರಣ- ಮೂವರಿಗೆ ಗಡಿಪಾರು ನೊಟೀಸ್

ಮಂಗಳೂರು:ಅನೈತಿಕ ಗುಂಡಾಗಿರಿಯಲ್ಲಿ ಪದೇ ಪದೇ ತೊಡಗಿಕೊಳ್ಳುವ ಆರೋಪಿಗಳ ವಿರುದ್ಧ ರೌಡಿಶೀಟರ್ ತೆರೆದು ಕ್ರಮಗಳನ್ನು ನಿರಂತರವಾಗಿ ತೆಗೆದುಕೊಳ್ಳಲಾಗುತ್ತದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಆರ್. ಜೈನ್
ಹೇಳಿದ್ದಾರೆ.

ಅನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪಿಗಳು ಯಾವ ಸಂಘಟನೆಗೆ ಸೇರಿದವರು,ಕಾರ್ಯಕರ್ತರು ಎಂಬುದು ನಮಗೆ ಮುಖ್ಯವಲ್ಲ.ನಮಗೆ ಅವರು ಆರೋಪಿಗಳು ಮಾತ್ರ ಎಂದು ಹೇಳಿದ್ದಾರೆ.

ಬಜರಂಗದಳದ ಮೂವರಿಗೆ ನೊಟೀಸ್ ಬಗ್ಗೆ ಪ್ರತಿಕ್ರಿಯಿಸಿ,
ಒಂದು ವರ್ಷದಲ್ಲಿ ಈಗಾಗಲೇ 60 ಇಂತಹ ರೌಡಿಗಳನ್ನು ಗಡೀಗಡೀಪಾರಿಗೆ ಕ್ರಮ ವಹಿಸಲಾಗಿದೆ. ಮೂವರು ಮಾತ್ರ ಅಲ್ಲ, ಅದಕ್ಕಿಂತ ಹೆಚ್ಚಿನ ಮಂದಿಯ ಮೇಲೆ ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದರು.

ಮೂವರ ಮೇಲೆ ಅತೀ ಹೆಚ್ಚಿನ ಪ್ರಕರಣಗಳು ದಾಖಲಾಗಿದ್ದು, ಅವರನ್ನು ಗಡೀಪಾರಿಗೆ ಸಂಬಂಧಿಸಿ ಠಾಣೆಯಿಂದ ಪ್ರಸ್ತಾವನೆ ಬಂದ ಹಿನ್ನೆಲೆಯಲ್ಲಿ, ನೊಟೀಸ್ ನೀಡಲಾಗಿದ್ದು, ಮುಂದಿನ ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್