ಮಂಡ್ಯ;ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ರೋಡ್ ಶೋ ಮಾರ್ಗ ಮಹಾದ್ವಾರಕ್ಕೆ ಇಟ್ಟಿದ್ದ ಉರಿಗೌಡ ಮತ್ತು ದೊಡ್ಡ ನಂಜೇಗೌಡ ಹೆಸರನ್ನು ತೆರವು ಮಾಡಲಾಗಿದೆ.
ಮಹಾದ್ವಾರಕ್ಕೆ ಬಾಲಗಂಗಾಧರನಾಥ ಸ್ವಾಮೀಜಿ ಮಹಾದ್ವಾರ ಎಂದು ಹೆಸರಿಡಲಾಗಿದೆ.
ಪ್ರಧಾನಿ ಮೋದಿ ನಡೆಸುವ ರೋಡ್ ಶೋ ಮಾರ್ಗದಲ್ಲಿ ಮಹಾದ್ವಾರಕ್ಕೆ ಉರಿಗೌಡ ಹಾಗೂ ದೊಡ್ಡ ನಂಜೇಗೌಡ ಎಂದು ಹೆಸರು ಇಡಲಾಗಿತ್ತು.ಇದಕ್ಕೆ ಕಾಂಗ್ರೆಸ್ ಭಾರೀ ವಿರೋಧ ವ್ಯಕ್ತಪಡಿಸಿತ್ತು.ಇದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಾಕ ಆಕ್ರೋಶ ವ್ಯಕ್ತವಾಗಿತ್ತು.