– ಅನಿಷಾ ಬೇಗಂ (34) ತಸ್ಮಿಯಾ (22) ಅಶ್ರಕ್ (28) ಅತೀಕ್ (22)
ಮಂಡ್ಯ;ಮಂಡ್ಯದಲ್ಲಿ ಘೋರ ದುರಂತ ನಡೆದಿದ್ದು, ನಾಲೆಯಲ್ಲಿ ಈಜಲು ಹೋಗಿದ್ದ ಐವರು ಮೃತಪಟ್ಟ ಘಟನೆ ಮಂಡ್ಯ ತಾಲೂಕಿನ ದೊಡ್ಡ ಕೊತ್ತಗೆರೆ ಗ್ರಾಮದ ಬಳಿ ನಡೆದಿದೆ.
ಮೃತರನ್ನು ಬೆಂಗಳೂರು ಮೂಲದ ಮೆಹತಾ (10) ಅನಿಷಾ ಬೇಗಂ (34) ತಸ್ಮಿಯಾ (22) ಅಶ್ರಕ್ (28) ಅತೀಕ್ (22) ಎಂದು ಗುರುತಿಸಲಾಗಿದೆ.
ಮೃತರು ಬೆಂಗಳೂರಿನ ನೀಲಸಂದ್ರ ಮೂಲದವರು ಎಂದು ತಿಳಿದು ಬಂದಿದೆ.ರಂಜಾನ್ ಹಬ್ಬದ ಬಳಿಕ ರಜೆ ಹಿನ್ನೆಲೆ ಹಲ್ಲಗೆರೆ ಗ್ರಾಮದ ಅಜ್ಜಿ ಮನೆಗೆ ಬಂದಿದ್ದರು. ಈ ವೇಳೆ ವಿಸಿ ನಾಲೆಯಲ್ಲಿ ಈಜಲು ಇಳಿದಿದ್ದ ಐವರು ಮೃತಪಟ್ಟಿದ್ದಾರೆ.
ಸದ್ಯ ಮೂವರ ಶವವನ್ನು ಹೊರ ತೆಗೆಯಲಾಗಿದ್ದು. ಇಬ್ಬರ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಹತೀಕಾ, ಅರ್ಷಕ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಶೋಧಕಾರ್ಯ ನಡೆಸುತ್ತಿದ್ದಾರೆ.
ಈ ಕುರಿತು ಬಸರಾಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.ಐವರ ಸಾವಿನಿಂದ ಮೃತರ ಮನೆಯ ಬಳಿ ಶೋಕದ ವಾತಾವರಣ ನಿರ್ಮಾಣವಾಗಿದೆ.