ಮಂಡ್ಯ;ನವವಧುವನ್ನು ಪೊಲೀಸರು ತಡರಾತ್ರಿ ಬಂದು ಠಾಣೆಗೆ ಕರೆದೊಯ್ದ ಬಗ್ಗೆ ಆರೋಪ ಮಂಡ್ಯದಿಂದ ಕೇಳಿ ಬಂದಿದೆ.
ಚೀರನಹಳ್ಳಿಯ ಬಲ್ಲೇಶ ಮತ್ತು ಕೋಲಾರ ಜಿಲ್ಲಾ ಶಿಡ್ಲಘಟ್ಟದ ಲಿಂಗಾಯತ ಯುವತಿ ಭಾಗ್ಯ ಎಂಬವರು ಎರಡು ವರ್ಷದಿಂದ ಪ್ರೀತಿಸುತ್ತಿದ್ದು, ಜೂ.8ಕ್ಕೆ ರಿಜಿಸ್ಟರ್ ಮದುವೆಯಾಗಿದ್ದಾರೆ. ನಂತರ ಇಬ್ಬರೂ ಚೀರನಹಳ್ಳಿಯ ಬಲ್ಲೇಶನ ಮನೆಯಲ್ಲಿ ವಾಸವಿದ್ದರು.
ಈ ಬಗ್ಗೆ ಶಿಡ್ಲಘಟ್ಟ ಠಾಣೆಯಲ್ಲಿ ಭಾಗ್ಯ ಪೋಷಕರು ದೂರು ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಶಿಡ್ಲಘಟ್ಟ ಪೊಲೀಸರು ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರ ಜತೆಗೂಡಿ ಚೀರನಹಳ್ಳಿಯ ಬಲ್ಲೇಶನ ಮನೆಗೆ ಶನಿವಾರ ತಡರಾತ್ರಿ ನುಗ್ಗಿ ಬಲವಂತವಾಗಿ ನವವಧುವನ್ನು ಮಂಡ್ಯ ಗ್ರಾಮಾಂತರ ಠಾಣೆಗೆ ಕರೆದೊಯ್ದಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
ಮಹಿಳಾ ಪೊಲೀಸರಿಲ್ಲದೆ ನವವಧುವನ್ನು ಠಾಣೆಗೆ ಕರೆದೊಯ್ದ ಬಗ್ಗೆ ಪೊಲೀಸರ ವಿರುದ್ದ ಯುವಕನ ಸಂಬಂಧಿಕರು ಎಸ್ಪಿಗೆ ದೂರು ನೀಡಿದ್ದಾರೆ.