ಮಂಗಳೂರು; 9 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ

ಮಂಗಳೂರು;9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಉರ್ವ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಗಳೂರಿನ ಕಣ್ಣೂರು ಅಡ್ಯಾರ್‌ ನಿವಾಸಿ ಹಸೈನಾರ್‌ ಆಲಿಯಾಸ್‌ ಹಸೈನ್‌(35) ಬಂಧಿತ ಆರೋಪಿ.

ಈತ 2012ರಲ್ಲಿ ಯುವತಿಯೋರ್ವಳು ಲೇಡಿಹಿಲ್‌ ಸಮೀಪ ಫ್ಲ್ಯಾಟ್‌ ಕಡೆಗೆ ಹೋಗುತ್ತಿದ್ದಾಗ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ. ಈ ಬಗ್ಗೆ ಉರ್ವ ಠಾಣೆಗೆ ಯುವತಿ ದೂರು ನೀಡಿದ್ದಳು.

ಈ ವೇಳೆ ಆರೋಪಿಯನ್ನು ಬಂಧಿಸಲಾಗಿತ್ತು.ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.

ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಈತನಿಗೆ 2014ರ ಅ.18ರಂದು 4 ತಿಂಗಳ ಕಾರಾಗೃಹ ಶಿಕ್ಷೆ ತೀರ್ಪು ಪ್ರಕಟವಾಗಿತ್ತು.ಆದರೆ ಆರೋಪಿ ತಲೆಮರೆಸಿಕೊಂಡಿದ್ದ. ಈ ಬಗ್ಗೆ ವಾರಂಟ್‌ ಹೊರಡಿಸಲಾಗಿದ್ದು, ಈ ಹಿನ್ನೆಲೆ ಈತನನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.

ಟಾಪ್ ನ್ಯೂಸ್