ವೃದ್ಧಾಪ್ಯದಲ್ಲಿ ನೋಡಿಕೊಂಡಿಲ್ಲ ಎಂದು ಮಕ್ಕಳಿಗೆ ಬುದ್ದಿ ಕಲಿಸಿದ ತಂದೆ; ಕೋಟ್ಯಾಂತರ ಮೌಲ್ಯದ ಆಸ್ತಿಯನ್ನು ಸರಕಾರಕ್ಕೆ ಬರೆದುಕೊಟ್ಟ ವೃದ್ಧ!

ಉತ್ತರಪ್ರದೇಶ;ವ್ಯಕ್ತಿಯೋರ್ವ ತನ್ನ ಕೋಟ್ಯಾಂತರ ಮೌಲ್ಯದ ಆಸ್ತಿಯನ್ನು ಮಕ್ಕಳ ಹೆಸರಿಗೆ ಬರೆಯದೆ ಸರಕಾರಕ್ಕೆ ಬರೆದುಕೊಟ್ಟ ಘಟನೆ ಮುಜಾಫರ್ನಗರದ ಬಿರಾಲ್ ಗ್ರಾಮದಲ್ಲಿ ನಡೆದಿದೆ.

ನಾಥು ಸಿಂಗ್ ಎಂಬವರಿಗೆ ಓರ್ವ ಪುತ್ರ ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ.ಆದರೆ ಮಕ್ಕಳು ಅವರನ್ನು ಸರಿಯಾಗಿ ನೋಡಿಕೊಂಡಿಲ್ಲ‌.ಇದರಿಂದ ಅವರು ಪ್ರಸ್ತುತ ವೃದ್ಧಾಶ್ರಮದಲ್ಲಿದ್ದಾರೆ.

ಇದೀಗ ನಾಥು ಸಿಂಗ್ ಅವರು ಯುಪಿ ಗವರ್ನರ್ ಗೆ ಆಸ್ತಿಯನ್ನು ಹಸ್ತಾಂತರಿಸಲು ಅಫಿಡವಿಟ್ ಸಲ್ಲಿಸಿದ್ದಾರೆ, ಅವರ ಯಾವುದೇ ವಂಶಸ್ಥರಿಗೆ ತಮ್ಮ ಆಸ್ತಿಯನ್ನು ಬರೆದುಕೊಡದೆ ಸರಕಾರಕ್ಕೆ ಆಸ್ತಿಯನ್ನು ವರ್ಗಾಯಿಸಿದ್ದಾರೆ. ಆ ಸ್ಥಳದಲ್ಲಿ ಸರ್ಕಾರ ಶಾಲೆ ಅಥವಾ ಆಸ್ಪತ್ರೆಯನ್ನು ತೆರೆಯಬೇಕೆಂದು ಬಯಸುವುದಾಗಿ ಹೇಳಿದ್ದಾರೆ.

ಈ 80 ವರ್ಷದ ನಾಥು ಸಿಂಗ್ ಸುಮಾರು ರೂ.1.5 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದು, ಅವೆಲ್ಲವನ್ನೂ ಸರಕಾರಕ್ಕೆ ಬರೆದುಕೊಟ್ಟಿದ್ದಾರೆ.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com