ಗಿನ್ನಿಸ್ ದಾಖಲೆ ಮಾಡಲು ರಾತ್ರಿ ನಿದ್ರೆಯನ್ನು ಕೂಡ ಬಿಟ್ಟು 7 ದಿನ ನಿರಂತರ ಅಳುತ್ತ ಕುಳಿತ ಯುವಕ; ಕೊನೆಗೆ ದೃಷ್ಟಿ ಕಳೆದುಕೊಂಡು ಪರದಾಟ!

ಗಿನ್ನಿಸ್ ದಾಖಲೆ ಮಾಡಲು ರಾತ್ರಿ ನಿದ್ರೆಯನ್ನು ಕೂಡ ಬಿಟ್ಟು 7 ದಿನ ನಿರಂತರ ಅಳುತ್ತ ಕುಳಿತ ಯುವಕ; ಕೊನೆಗೆ ದೃಷ್ಟಿ ಕಳೆದುಕೊಂಡು ಪರದಾಟ!

ನೈಜೀರಿಯಾ ಪ್ರಜೆಯೋರ್ವ ತಾನು ಗಿನ್ನೆಸ್‌ ದಾಖಲೆ ಮಾಡಬೇಕೆಂದು ಬರೋಬ್ಬರಿ 7 ದಿನಗಳ ಕಾಲ ನಿದ್ದೆ ಮಾಡದೇ ಕಣ್ಣೀರು ಸುರಿಸಿದ್ದಾರೆ.

ನೈಜೀರಿಯಾದ ವ್ಯಕ್ತಿ ತಾನು ಅಳುವುದರಲ್ಲಿಯೇ ಗಿನ್ನೆಸ್‌ ದಾಖಲೆ ಮಾಡಬೇಕು ಎಂದು ವಿವಿಧ ಕಸರತ್ತು ಮಾಡಿ, ಈಗ ಕಣ್ಣಿನ ದೃಷ್ಟಿಗೆ ಆಪತ್ತು ತಂದುಕೊಂಡಿದ್ದಾನೆ.

ಗಿನ್ನೆಸ್‌ ದಾಖಲೆ ಎಂದಾಕ್ಷಣ ಏನಾದರೂ ಹೊಸತನ್ನು ಮಾಡಬೇಕು ಎಂದುಕೊಂಡ ಯುವಕ ಅಳುವುದರಲ್ಲಿ ದಾಖಲೆ ಮಾಡುವುದಕ್ಕೆ ಮುಂದಾಗಿದ್ದಾನೆ. ಇದಕ್ಕಾಗಿ ಸತತ 7 ದಿನಗಳ ಕಾಲ ನಿದ್ರೆಯನ್ನೂ ಮಾಡದೇ ಸತತವಾಗಿ ಕಣ್ಣೀರು ಹಾಕಿದ್ದಾನೆ.

ಆದರೆ ಕಣ್ಣೀರು ಸುರಿಸಿದ ದಾಖಲೆಗಳನ್ನು ಗಿನ್ನೆಸ್‌ ಸಂಸ್ಥೆಗೆ ಕಳುಹಿಸುವ ಮೊದಲೇ ಯುವಕನ ಕಣ್ಣಿನ ದೃಷ್ಟಿಯೇ ಕಾಣದಾಗಿದೆ.ತನ್ನ ಕಣ್ಣುಗಳು ದೃಷ್ಟಿಯನ್ನು ಕಳೆದುಕೊಂಡಿವೆ ಎಂದು ಪರದಾಡಿದ್ದಾನೆ.

ಗಿನ್ನೀಸ್ ದಾಖಲೆಗೆ ಕಣ್ಣೀರು ಸುರಿಸಿದ ವ್ಯಕ್ತಿಯನ್ನು ತೆಂಬು ಎಬೆರೆ ಎಂದು ಹೇಳಲಾಗುತ್ತಿದೆ. ಈ ವ್ಯಕ್ತಿ ಕಳೆದ 7 ದಿನಗಳ ಕಾಲ ಎಡೆಬಿಡದೆ ಅಳುತ್ತಾ ವಿಶ್ವದಾಖಲೆ ನಿರ್ಮಿಸಿದ್ದಾನೆ.

ಕಣ್ಣೀರು ಸುರಿಸುವುದನ್ನು ನಿಲ್ಲಿಸಿದ ಆರಂಭದಲ್ಲಿ ತಲೆನೋವು, ಮುಖದ ಊತ, ಉಬ್ಬಿದ ಕಣ್ಣುಗಳ ನೋವುಗಳಿಂದ ಬಳಲುತ್ತಿದ್ದನು.ಇದಾದ ನಂತರ ಸುಮಾರು 45 ನಿಮಿಷಗಳ ಕಾಲ ತನ್ನ ದೃಷ್ಟಿ ಕಳೆದುಕೊಂಡಿದ್ದನು.

ಈತನಿಗೆ ವೈದ್ಯರು ಕಣ್ಣು ತಪಾಸಣೆ ಮಾಡಿದಾಗ, ಕಣ್ಣಿನಲ್ಲಿ ಮಂಜು ಕವಿದಂತಾಗಿದ್ದು, ದೃಷ್ಟಿ ಮರು ಬರುವ ಭರವಸೆ ನೀಡಿದ್ದಾರೆ.

ಆತ ತಾನು ಅಳುತ್ತಾ ರೆಕಾರ್ಡ್‌ ಕೂಡ ಮಾಡಿದ ದಾಖಲೆಗಳೊಂದಿಗೆ ಗಿನ್ನೆಸ್‌ ರೆಕಾರ್ಡ್‌ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾನೆ. ಆದರೆ, ಗಿನ್ನೆಸ್‌ ಸಂಸ್ಥೆಯವರು ಅದನ್ನು ದಾಖಲೆಯಾಗಿ ಪರಿಗಣಿಸದೆ ತಿರಸ್ಕಾರ ಮಾಡಿದ್ದಾರೆ.

ಟಾಪ್ ನ್ಯೂಸ್

ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಮೀಲಾದ್ ರ್ಯಾಲಿಯಲ್ಲಿ ತೆರಳುತ್ತಿದ್ದ ಯುವಕರು

ಕಾಪು;ಮೀಲಾದ್ ರ್ಯಾಲಿಯಲ್ಲಿ ಸಾಗುತ್ತಿದ್ದ ಯುವಕರ ಗುಂಪು ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ