ಗುರುಗ್ರಾಮ್;ಚಲಿಸುತ್ತಿರುವ ಕಾರಿನಿಂದ ನೋಟುಗಳನ್ನು ಎಸೆದ ಘಟನೆ ಗುರುಗ್ರಾಮ್‌ನ ಡಿಎಲ್‌ಎಫ್ ಗಾಲ್ಫ್ ಕೋರ್ಸ್ ರಸ್ತೆಯ ಕೆಳಸೇತುವೆಯಲ್ಲಿ ನಡೆದಿದೆ.
ಯೂಟ್ಯೂಬರ್ ಜೋರಾವರ್ ಸಿಂಗ್ ಕಲ್ಸಿ ಮತ್ತು ಆತನ ಸ್ನೇಹಿತ ಲಕ್ಕಿ ಕಾಂಬೋಜ್ ಅಪಾಯಕಾರಿಯಾಗಿ ಕಾರು ಚಲಾಯಿಸುತ್ತಾ, ಹಿಂಬದಿಯಿಂದ ನೋಟುಗಳನ್ನು ಎಸೆಯುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.ಇವರು ರೀಲ್ಸ್ ಗಾಗಿ ಈ ರೀತಿ ಮಾಡಿದ್ದರು ಎನ್ನಲಾಗಿದೆ.
ಮಾರ್ಚ್ 2 ರಂದು ಗುರುಗ್ರಾಮ್‌ನ ಡಿಎಲ್‌ಎಫ್ ಗಾಲ್ಫ್ ಕೋರ್ಸ್ ರಸ್ತೆಯ ಕೆಳಸೇತುವೆಯಲ್ಲಿ ಈ ವಿಡಿಯೋ ರೆಕಾರ್ಡ್ ಮಾಡಲಾಗಿದೆ.ಇದಾದ ಬಳಿಕ ವಿಡಿಯೋ ನೆಟ್ಟಿನಲ್ಲಿ ಭಾರೀ ವೈರಲ್ ಆಗಿತ್ತು.ವಿಡಿಯೋ ವೈರಲ್ ಆದ ಬೆನ್ನಲ್ಲೇ ಅದನ್ನು ಡಿಲೇಟ್ ಮಾಡಲಾಗಿತ್ತು.
ಇದೀಗ ಪೊಲೀಸರು ಅಪಾಯಕಾರಿ ಚಾಲನೆ ಸೇರಿ ಮೋಟಾರು ವಾಹನ ಕಾಯಿದೆ ಅಡಿಯಲ್ಲಿ ಯೂಟ್ಯೂಬರ್ ಜೋರಾವರ್ ಸಿಂಗ್ ಕಲ್ಸಿ ಮತ್ತು ಆತನ ಸ್ನೇಹಿತ ಲಕ್ಕಿ ಕಾಂಬೋಜ್ ನನ್ನು ಬಂಧಿಸಿದ್ದಾರೆ.