‌ಜನರ ಮನಗೆದ್ದ ಜೈಲಿನಲ್ಲಿ ಕುಡುಕ ಹಾಡಿದ ಹಾಡು, ವೈರಲ್ ವಿಡಿಯೋ ವೀಕ್ಷಿಸಿ….

ಕುಡಕನೋರ್ವ ಜೈಲಿನ ಶೆಲ್ ನಲ್ಲಿ ಹಾಡಿದ ಇಂಪಾದ ಹಾಡು ಇದೀಗ ನೆಟ್ಟಿನಲ್ಲಿ ಭಾರೀ ವೈರಲ್ ಆಗಿದೆ. ಆತನ ಪ್ರತಿಭೆಗೆ ಮೆಚ್ಚಿ ಆತನಿಗೆ ಹಲವು ಆಫರ್ ಗಳು ಬರುತ್ತಿದೆ.

ಕಂಗಯ್ಯ ಕುಮಾರ್‌ ಎನ್ನುವಾತನ ಬಿಹಾರದ ಕೈಮೂರ್ ಜಿಲ್ಲೆಯ ನಿವಾಸಿಯಾಗಿದ್ದಾನೆ‌. ಈತ ಕೆಲಸದ ನಿಮಿತ್ತ ಯುಪಿಗೆ ಹೋಗಿದ್ದನು ಮತ್ತು ಅಲ್ಲಿ ಮದ್ಯಪಾನ ಮಾಡಿ ಬಿಹಾರ ಗಡಿ ಪ್ರವೇಶಿಸಿ ಬಂಧನಕ್ಕೊಳಗಾಗಿದ್ದ.

ಬಂಧಿತ ಕಂಗಯ್ಯ ಕುಮಾರ್‌ ಲಾಕ್‌ ಅಪ್‌ ನಲ್ಲೇ ಭೋಜ್‌ ಪುರಿ ಹಾಡನ್ನು ಯಾವುದೇ ತಪ್ಪಿಲ್ಲದೇ ಹಾಡುವುದು ಪೊಲೀಸರ ಗಮನಕ್ಕೆ ಬಂದಿದೆ. ಲಾಕಪ್‌ ನಲ್ಲಿ “ದರೋಗಾಜಿ ಹೋ ಸೋಚಿ-ಸೋಚಿ ಜಿಯಾ ಹಮ್ರೋ ಕಹೆ ಘಬ್ರತಾ.” ಎಂಬ ಜನಪ್ರಿಯ ಭೋಜ್‌ಪುರಿ ಹಾಡನ್ನು ಕುಮಾರ್ ಹಾಡಿದ್ದು, ಇದರ ವಿಡಿಯೋವನ್ನು ವೈರಲ್ ಮಾಡಲಾಗಿದೆ.

ಈತನ ಹಾಡಿಗೆ ನೆಟ್ಟಿಗರು ಫಿಧಾ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಬಾಲಿವುಡ್ ಗಾಯಕ ಅಂಕಿತ್ ತಿವಾರಿ ಕೂಡ ವೀಡಿಯೊವನ್ನು ಹಂಚಿಕೊಂಡಿದ್ದು ಈ ವೈರಲ್‌ ಕುಡುಕನಿಗೆ ತಮ್ಮ ಕಂಪನಿಯಲ್ಲೇ ಹಾಡನ್ನು ಹಾಡಲು ಅವಕಾಶ ಕೊಡುವುದಾಗಿ ಹೇಳಿದ್ದಾರೆ.

ಟಾಪ್ ನ್ಯೂಸ್