ಮಗಳ ಚಿಕಿತ್ಸೆಗೆ ಸ್ವಂತ ರಕ್ತ ಮಾರಾಟ ಮಾಡುತ್ತಿದ್ದ ತಂದೆ ಕೊನೆಗೆ ನೊಂದು ಆತ್ಮಹತ್ಯೆ ಮಾಡಿಕೊಂಡ!; ಹೃದಯವಿದ್ರಾಹಕ ಘಟನೆ ವರದಿ
ಮಧ್ಯಪ್ರದೇಶ;ಸತ್ನಾದಲ್ಲಿ ತಂದೆಯೊಬ್ಬ ತನ್ನ ಮಗಳ ಚಿಕಿತ್ಸೆಗೆ ಹಣವಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ದಯಾನೀಯ ಘಟನೆ ನಡೆದಿದೆ.
ಪ್ರಮೋದ್ ಆತ್ಮಹತ್ಯೆ ಮಾಡಿಕೊಂಡವರು.ಪ್ರಮೋದ್ ಪುತ್ರಿ ಅನುಷ್ಕಾ ಮಗಳಿಗೆ ಐದು ವರ್ಷಗಳ ಹಿಂದೆ ಅಪಘಾತಕ್ಕೀಡಾಗಿ ಹಾಸಿಗೆ ಹಿಡಿದಿದ್ದಳು.ಅವಳಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ.ಮಗಳಿಗೆ ಚಿಕಿತ್ಸೆಗೆ ಪ್ರಮೋದ್ ಮನೆ, ಅಂಗಡಿಯನ್ನು ಮಾರಾಟ ಮಾಡಿದ್ದಾರೆ.ಕೊನೆಗೆ ದಿಕ್ಕು ತೋಚದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅನುಷ್ಕಾಗೆ ರಸ್ತೆ ಅಪಘಾತದಲ್ಲಿ ಬೆನ್ನುಮೂಳೆಗೆ ಪೆಟ್ಟಾಗಿದ್ದು, ಅಂದಿನಿಂದ ಹಾಸಿಗೆ ಹಿಡಿದಿದ್ದಾರೆ.ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಖಾಲಿಯಾಗಿದೆ, ಆಹಾರ ಧಾನ್ಯಗಳಿಲ್ಲ ಎಂದು ಪ್ರಮೋದ್ ಕೆಲವೊಮ್ಮೆ ರಕ್ತ ಮಾರಾಟ ಮಾಡಿದ್ದು ಕೂಡ ಇದೆ ಎಂದು ಆತನ ಕುಟುಂಬದವರು ಹೇಳಿದ್ದಾರೆ.
ನನ್ನ ತಂದೆ ನಿರಂತರ ರಕ್ತ ಮಾರಾಟ ಮಾಡಿದ ಕಾರಣ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ನಂತರದಲ್ಲಿ ಇದರಿಂದ ಅವರಿಗೆ ಅವರಿಗೆ ದುಡಿಯಲು ಕೂಡ ಸಾಧ್ಯವಾಗಿಲ್ಲ ಎಂದು ಅನುಷ್ಕಾ ಹೇಳಿದ್ದಾರೆ.
ಅನುಷ್ಕಾ ಶೈಕ್ಷಣಿಕ ಕ್ಷೇತ್ರದಲ್ಲಿ ಒಳ್ಳೆಯ ಸಾಧನೆ ಮಾಡಿದ್ದಾರೆ. ಬೋರ್ಡ್ ಪರೀಕ್ಷೆಗಳಲ್ಲಿ ಕೂಡ ಉತ್ತಮ ಸಾಧನೆ ಮಾಡಿದ್ದಾರೆ.ಅದಕ್ಕಾಗಿ ಆಕೆಯನ್ನು ಊರಿನಲ್ಲಿ ಗೌರವಿಸಲಾಗಿದೆ.ಆದರೆ ಮುಂದೆ ಆಕೆಗೆ ಯಾರೂ ಸಹಾಯಕ್ಕೆ ಬಂದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಈಗ ಹಾಸಿಗೆ ಹಿಡಿದ ಮಗಳನ್ನು ಬಿಟ್ಟು ತಂದೆ ರೈಲ್ವೇ ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮಗಳ ಸ್ಥಿತಿಯಿಂದ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಕೂಡ ಹೇಳಲಾಗಿದೆ.