ಬೀದಿ ನಾಯಿಗಳನ್ನು ಹಿಡಿದು ಮಾಂಸ ಮಾಡಿ ಮಾರಾಟ, ಜನರಿಗೆ ವಂಚನೆ, ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರು

ಉತ್ತರಕನ್ನಡ; ಕಾಡುಹಂದಿ ಮಾಂಸ ಎಂದು ಗ್ರಾಹಕರನ್ನು ನಂಬಿಸಿ ನಾಯಿ ಮಾಂಸವನ್ನು ಮಾರಾಟ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮೊಗ್ಟಾ ಮತ್ತು ಹಿಲ್ಲೂರು ಗ್ರಾಮದಲ್ಲಿ ನಡೆದಿದೆ.

ಕಾಡು ಹಂದಿ ಮಾಂಸವೆಂದು ನಾಯಿ ಮಾಂಸದ ಜೊತೆಗೆ ಊರ ಹಂದಿಯ ಮಾಂಸ ನೀಡಿದ್ದ ಇಬ್ಬರು ಅಲೆಮಾರಿ ಜನಾಂಗದ ಯುವಕರನ್ನು ಗ್ರಾಮಸ್ಥರು ರೆಡ್ ಹಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಾಂಸದ ಬಗ್ಗೆ ಸಂಶಯ ಹೊಂದಿದ್ದ ಸ್ಥಳೀಯರು ಯುವಕರ ಹಿಂದೆ ಬಿದ್ದಿದ್ದರು. ಮತ್ತೆ ಮಾಂಸ ತರುವಂತೆ ಆಗ್ರಹಿಸಿದ್ದಾರೆ. ಈ ವೇಳೆ ಯುವಕರು ಮಾಂಸಕ್ಕಾಗಿ ನಾಯಿಯನ್ನು ಹಿಡಿಯಲು ಯತ್ನಿಸುವಾಗ ಸಿಕ್ಕಿಬಿದ್ದಿದ್ದಾರೆ.

ಈ ಕುರಿತು ಅಂಕೋಲಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com