ವ್ಯಕ್ತಿಯೊಬ್ಬ ನಕಲಿ ಹೆಸರುಗಳನ್ನು ಬಳಸಿ ವೀರ್ಯದಾನ ಮಾಡಿ 60ಕ್ಕೂ ಹೆಚ್ಚು ಮಕ್ಕಳ ತಂದೆಯಾಗಿರುವ ಬಗ್ಗೆ
ಆಸ್ಟ್ರೇಲಿಯಾದಿಂದ ವರದಿಯಾಗಿದೆ.
ಬೇರೆ ಬೇರೆ ಪೋಷಕರ ಮಕ್ಕಳನ್ನು ನೋಡಿದಾಗ ಅವರ ಕೆಲವು ಮಕ್ಕಳು ಒಂದೇ ರೀತಿ ಕಾಣುವುದನ್ನು ಕಂಡು ತನಿಖೆ ನಡೆಸಿದಾಗ ಅಸಲಿಯತ್ತು ಬಯಲಾಗಿದೆ.
ವ್ಯಕ್ತಿಯೋರ್ವ ನಾಲ್ಕು ವಿಭಿನ್ನ ಹೆಸರುಗಳನ್ನು ಬಳಸಿ ವೀರ್ಯವನ್ನು ದಾನ ಮಾಡಿದ್ದಾನೆ.ಇದಕ್ಕಾಗಿ ಸಾಮಾಜಿಕ ಜಾಲತಾಣ ಬಳಕೆ ಮಾಡಿದ್ದಾನೆ ಎನ್ನುವುದು ಬಳಿಕ ಬಯಲಾಗಿದೆ.
ಹ್ಯೂಮನ್ ಫರ್ಟಿಲೈಸೇಶನ್ ಮತ್ತು ಎಂಬ್ರಿಯಾಲಜಿ ಅಥಾರಿಟಿ (ಎಚ್‌ಎಫ್‌ಇಎ) ಪ್ರಕಾರ, ವೀರ್ಯ ದಾನಿಗಳು ತಮ್ಮ ದೇಣಿಗೆಗಾಗಿ ಪಾವತಿಯನ್ನು ಪಡೆಯುವುದು ಕಾನೂನುಬಾಹಿರವಾಗಿದೆ.ಅವರ ಖರ್ಚುಗಳನ್ನು ಸರಿದೂಗಿಸಲು ಪ್ರತಿ ಕ್ಲಿನಿಕ್ ಭೇಟಿಗೆ ಗರಿಷ್ಠ 35 ಯೂರೋಗಳನ್ನು ಸ್ವೀಕರಿಸಲು ಅವರಿಗೆ ಅನುಮತಿಸಲಾಗಿದೆ. ಪ್ರಯಾಣ, ವಸತಿ ಅಥವಾ ಮಕ್ಕಳ ಆರೈಕೆಗಾಗಿ ಅವರ ವೆಚ್ಚಗಳು ಈ ಮೊತ್ತವನ್ನು ಮೀರಿದರೆ ಅವರು ಹೆಚ್ಚಿನ ಮೊತ್ತವನ್ನು ಕ್ಲೈಮ್ ಮಾಡಬಹುದು ಎಂದು ಕೂಡ ಇದೆ.ಆದರೆ ಈ ಪ್ರಕರಣದಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.