ತನ್ನದೇ ಪತ್ನಿಯನ್ನು 19 ವರ್ಷಗಳ ಬಳಿಕ ಮರು ಮದುವೆಯಾದ ಪತಿ!

ಪತಿಯೊಬ್ಬ 19 ವರ್ಷಗಳ ನಂತರ ಮತ್ತೆ ತನ್ನ ಹೆಂಡತಿಯನ್ನು ಮದುವೆಯಾಗಿ ಸುದ್ದಿಯಾಗಿದ್ದಾನೆ.

ಒಡಿಶಾದ ಕಟಕ್ ಜಿಲ್ಲೆಯ ಭಬ್‌ಚಂದ್‌ಪುರ ಗ್ರಾಮದಲ್ಲಿ ಘಟ‌ನೆ ನಡೆದಿದೆ.ಬಸಂತ್ ಪರಿದಾ ಎನ್ನುವ ವ್ಯಕ್ತಿ ಊರ್ಮಿಳಾ ಪರಿದಾಪತಿಗೆ ಎರಡನೇ ಮದುವೆಯಾಗಿದ್ದಾನೆ.

2004ರಲ್ಲಿ ಸೋದರಳಿಯ ಮನೆಗೆ ಹೋಗಲು ಹೊರಟ ಊರ್ಮಿಳಾ ನಾಪತ್ತೆಯಾಗಿದ್ದಳು.ಆಕೆ ಮನೆಯ ದಾರಿಯನ್ನು ಮರೆತಿದ್ದಳು.ಬಸಂತ್ ಪತ್ನಿಗಾಗಿ ಹಲವು ಕಡೆ ಹುಡುಕಾಡಿದ್ದಾನೆ. ಆದರೆ ಸಿಕ್ಕಿಲ್ಲ. ಊರ್ಮಿಳಾ ಮನೆ ಬಿಟ್ಟು 19 ವರ್ಷಗಳು ಕಳೆದಿವೆ.

ತಿಗಿರಾ ಪಟ್ಟಣದಲ್ಲಿ ವ್ಯಕ್ತಿಯೊಬ್ಬರು ಅಸಹಾಯಕ ಸ್ಥಿತಿಯಲ್ಲಿದ್ದ ಊರ್ಮಿಳಾ ಅವರನ್ನು ನೋಡಿ ವಿಡಿಯೋ ಮಾಡಿದ್ದಾರೆ. ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ನಂತರ 19 ವರ್ಷಗಳ ನಂತರ ಊರ್ಮಿಳಾ ಪತ್ತೆಯಾಗಿದ್ದಾರೆ.

ವಿಡಿಯೋ ನೋಡಿದ ಜಿಲ್ಲಾಧಿಕಾರಿ ಆಕೆಯನ್ನು ಶ್ರೀ ಮಂದಿರ ಸೇವಾಶ್ರಮಕ್ಕೆ ಸೇರಿಸಿದ್ದಾರೆ.ಆಕೆಗೆ ಅಲ್ಲಿ ಚಿಕಿತ್ಸೆ ನೀಡಲಾಗಿದೆ.ಬಳಿಕ ಆಕೆಯನ್ನು ಪತಿಯನ್ನು ಹುಡುಕಾಟ ಮಾಡಿ ಆತನಿಗೆ ಒಪ್ಪಿಸಲಾಗಿದೆ.

ಟಾಪ್ ನ್ಯೂಸ್