ಪೊಲೀಸ್ ವಾಹನದ ಜೊತೆ ಪರಾರಿಯಾದ ಪೊಲೀಸ್ ವಶದಲ್ಲಿದ್ದ ಆರೋಪಿ

ಪೊಲೀಸ್ ವಾಹನದ ಜೊತೆ ಪರಾರಿಯಾದ ಪೊಲೀಸ್ ವಶದಲ್ಲಿದ್ದ ಆರೋಪಿ

ಹರ್ಯಾಣ: ಪೊಲೀಸರ ವಶದಲ್ಲಿದ್ದ ಆರೋಪಿಯೊಬ್ಬ ಪೊಲೀಸ್ ವಾಹನದ ಜೊತೆ ಎಸ್ಕೇಪ್ ಆಗಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.

ರಸ್ತೆಯಲ್ಲಿ ಜಗಳವಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕೂರಿಸಿದ್ದ ಪೊಲೀಸರು ಮತ್ತೊಂದು ಪ್ರಕರಣದ ಸ್ಥಳಕ್ಕೆ ತೆರಳಿದ್ದರು.

ಈ ವೇಳೆ ವಾಹನದ ಕೀಯನ್ನು ಪೊಲೀಸರು ಬಿಟ್ಟು ಹೋಗಿದ್ದಾರೆ. ಪೊಲೀಸರು ಹೋದ ಬೆನ್ನಲ್ಲೆ ಇತ್ತ ವಾಹನದಲ್ಲಿ ವ್ಯಕ್ತಿ ಪೊಲೀಸ್‌ ವಾಹನವನ್ನೇ ಬಳಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.

ಕಾರನ್ನು ಘಟನಾ ಸ್ಥಳದಿಂದ 10 ಕಿ.ಮೀ ದೂರದ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ಆರೋಪಿ ಕಾರಿನ ಕೀ ಜೊತೆ ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಬಂದ ಪೊಲೀಸರು ವಾಹನವನ್ನು ವಶಪಡಿಸಿಕೊಂಡರೂ ಕೂಡ ಅದರ ಕೀ ಪತ್ತೆಹಚ್ಚಲು ಸಾಧ್ಯವಾಗಿಲ್ಲ.

ಪರಾರಿಯಾದವನ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್