ಸೌದಿ ಅರೇಬಿಯಾ; ಕಳೆದ 30 ವರ್ಷಗಳಿಂದ ಈ ವ್ಯಕ್ತಿ ನಿದ್ದೆಯೇ ಮಾಡಿಲ್ಲ!; ಅಚ್ಚರಿ ಸುದ್ದಿ

ಸೌದಿಅರೇಬಿಯಾ;ಕಳೆದ 30 ವರ್ಷಗಳಿಂದ ಸೌದಿಯ ಪ್ರಜೆಯೋರ್ವರು ತುಸುವೂ ನಿದ್ದೆಯೇ ಮಾಡದೆ ಜಗತ್ತಿಗೆ ಅಚ್ಚರಿಯನ್ನು ಮೂಡಿಸಿದ್ದಾರೆ.

ಸೌದಿಯ 70 ವರ್ಷದ ವೃದ್ಧರೊಬ್ಬರು ಕಳೆದ 30 ವರ್ಷಗಳಿಂದ ನಿದ್ದೆಯೇ ಮಾಡಿಲ್ಲ.ಇದಕ್ಕೆ ವೈದ್ಯರಿಗೆ ಯಾವುದೇ ಪರಿಹಾರವನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ ಎಂದು ಅವರು ಇತ್ತೀಚಿನ ದೂರದರ್ಶನದ ಸಂದರ್ಶನದಲ್ಲಿ ಹೇಳಿದರು.

ಸೌದ್ ಬಿನ್ ಮುಹಮ್ಮದ್ ಅಲ್-ಘಮ್ದಿ ಎಂಬ ವೃದ್ಧನಿಗೆ ನಿದ್ರೆ ಬರುವಂತೆ ಮಾಡಲು ವೈದ್ಯರು ತಮ್ಮಿಂದ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರೂ ಯಾವುದೇ ಫಲ ಸಿಕ್ಕಿಲ್ಲ.

ಇವರ ಈ ಸ್ಥಿತಿ ಅನೇಕರಲ್ಲಿ ಧಿಗ್ಬ್ರಮೆ ಹುಟ್ಟಿಸಿದೆ. ಅನೇಕರು ಇವರನ್ನು ಅಚ್ಚರಿಯಿಂದ ಕುತೂಹಲದಿಂದ ನೋಡಲು ಶುರು ಮಾಡಿದ್ದಾರೆ ಎಂದು ಸ್ವತಃ ಮೊಹಮ್ಮದ್ ಅಲ್ ಘಮ್ಡಿ ಹೇಳಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಯಸ್ಕ ವ್ಯಕ್ತಿಯ ಕಥೆ ಟ್ರೆಂಡಿಂಗ್ ನಲ್ಲಿದೆ. ವಿಶೇಷವಾಗಿ ವೈದ್ಯರು ಅವನನ್ನು ನಿದ್ರೆ ಮಾಡಲು ಪರಿಹಾರವನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ ಎನ್ನುವುದು ಅಚ್ವರಿ ಮೂಡಿಸಿದೆ.

ಅವರು 30 ವರ್ಷ ಕಳೆದರೂ ಇನ್ನೂ ತನ್ನ ನಿದ್ರಾಹೀನತೆಗೆ ಪರಿಹಾರವನ್ನು ಹುಡುಕುವ ಪ್ರಯಾಣವನ್ನು ಮುಂದುವರೆಸುತ್ತಿದ್ದಾರೆ. ಅದು ಕೆಲವೊಮ್ಮೆ ಅವರನ್ನೇ ಅಸಾಹಯಕತೆಗೆ ದೂಡುತ್ತದೆ ಎಂದು ಅವರು ಹೇಳಿದ್ದಾರೆ.

ಟಾಪ್ ನ್ಯೂಸ್