ಲಕ್ಷಾಂತರ ರೂ. ಖರ್ಚು ಮಾಡಿ ನಾಯಿಯಾಗಿ ಬದಲಾದ ಮನುಷ್ಯ; ವಿಚಿತ್ರ ಸುದ್ದಿ

ಜಪಾನ್ ನ ಟೋಕೊ ಎಂಬಲ್ಲಿ ವ್ಯಕ್ತಿಯೋರ್ವ ಸುಮಾರು 13ಲಕ್ಷ ಖರ್ಚು ಮಾಡಿ ನಾಯಿಯಾಗಿ ಬದಲಾಗಿದ್ದು, ಸದ್ಯ ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಪಾನ್‌ನಲ್ಲಿ ಮಾನವನೊಬ್ಬ ಶ್ವಾನವಾಗಿ ಬದಲಾಗಿದ್ದಾನೆ. ಮಾನವನಿಂದ ಶ್ವಾನವಾಗಿ ಬದಲಾಗಲು ಆತ 13.24 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ ಎಂದು ವರದಿಯಾಗಿದೆ.

ಜಪಾನ್‌ನ ಜೆಪೆಟ್ ಎಂಬ ಕಂಪನಿಯು ಈತನಿಗಾಗಿ ನಾಯಿಯ ಕಾಸ್ಟ್ಯೂಮ್ ತಯಾರಿಸಿದೆ.ಈಗ ಈತನು ನಾಲ್ಕು ಕಾಲಿನಿಂದ ಓಡಾಡಿಕೊಂಡಿದ್ದಾನೆ.ಯುವತಿಯೊಬ್ಬಳು ಕೊಲಿ ನಾಯಿಯನ್ನು ಹಿಡಿದುಕೊಂಡು ತಿರುಗಾಡುವ, ಆ ಕೃತಕ ನಾಯಿಯು ರಸ್ತೆ ಮೇಲೆ ಹೊರಳಾಡುವ ವಿಡಿಯೊ ಸಂಚಲನ ಮೂಡಿಸಿದೆ.

ಟೋಕೊ ಎಂಬಾತನಿಗೆ ಮೊದಲಿನಿಂದಲೂ ನಾಯಿಗಳ ಮೇಲೆ ಪ್ರೀತಿ. ಅಲ್ಲದೆ, ಕೆಲ ವರ್ಷಗಳ ಹಿಂದೆ ತಾನು ಕೂಡ ಶ್ವಾನವಾಗಿ ಬದಲಾಗಬೇಕು ಎಂಬ ಆಸೆ ಮೂಡಿದ್ದು, ಇದಕ್ಕಾಗಿ ಆತ ಜೆಪೆಟ್ ಕಂಪನಿಯ ಮೊರೆಹೋಗಿದ್ದಾನೆ.

ಕಂಪೆನಿ ಈತನಿಗೆ ಇಷ್ಟವಾದ ನಾಯಿಯ ಹಾಗೆ, ನಾಯಿಯನ್ನೇ ಹೋಲುವ ಹಾಗೆ ಕಾಸ್ಟ್ಯೂಮ್ ರೆಡಿ ಮಾಡಿಸಿಕೊಟ್ಟಿದೆ.

ಟಾಪ್ ನ್ಯೂಸ್