ಮೊಬೈಲ್ ಟವರ್ ಏರಿ ಹೈಡ್ರಾಮ ಸೃಷ್ಟಿಸಿದ ವ್ಯಕ್ತಿ, ಸ್ಥಳಕ್ಕೆ ಜಡ್ಜ್ ಬರುವಂತೆ ಪಟ್ಟು, ಮುಂದೇನಾಯ್ತು ಗೊತ್ತಾ?

ಧಾರವಾಡ:ಮೊಬೈಲ್ ಟವರ್ ಏರಿ ವ್ಯಕ್ತಿಯೋರ್ವ ಹೈಡ್ರಾಮ ಸೃಷ್ಟಿಸಿರುವ ಘಟನೆ ವರದಿಯಾಗಿದೆ.

ಜಾವೇದ್ ದಲಾಯತ್ (40) ಎಂಬಾತ ಸಣ್ಣಪುಟ್ಟ ಕಳ್ಳತನ ಪ್ರಕರಣಗಳಲ್ಲಿನ ಆರೋಪಿಯಾಗಿದ್ದಾನೆ.

ಮದ್ಯ ಸೇವಿಸಿ ಬಂದಿದ್ದ ಈತ ಪೊಲೀಸರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಜ್ಯುಬಿಲಿ ವೃತ್ತದಲ್ಲಿರುವ ಮೊಬೈಲ್ ಟವರ್‌ ಏರಿ ಕುಳಿತಿದ್ದಾನೆ.

ಇದನ್ನು ಗಮನಿಸಿದ ಜನ ಪೊಲೀಸರಿಗೆ ಮಾಹಿತಿ ತಿಳಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಈತನ ಮನವೊಲಿಸಲು ಪ್ರಯತ್ನಿಸಿದರು.ನ್ಯಾಯಾಧೀಶರು ಬಂದರೆ ಮಾತ್ರ ಕೆಳಗಿಳಿಯುತ್ತೇನೆ ಎಂದು ಈತ ಪಟ್ಟು ಹಿಡಿದಿದ್ದ.

ಎರಡು ಗಂಟೆಗೂ ಅಧಿಕ ಸಮಯ ಈತ ಟವರ್ ನಲ್ಲೇ ಕುಳಿತಿದ್ದ.ಬಳಿಕ ಈತನಿಗೆ ಮನವೊಳಿಕೆ ಮಾಡಿ ಕೆಳಗೆ ಇಳಿಸಲಾಗಿದೆ.

ಟಾಪ್ ನ್ಯೂಸ್