ಧಾರವಾಡ;ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಾಲಿಕೆ ಕಚೇರಿ ಮುಂದೆ ನಡೆಸುತ್ತಿರುವ ಮುಷ್ಕರದಲ್ಲಿ ಭಾಗಿಯಾಗಿದ್ದ ನೌಕರನೊಬ್ಬ ಭಿತ್ತಿ ಪತ್ರದೊಂದಿಗೆ ಟವರ್ ಏರಿ ಹೈಡ್ರಾಮ ನಡೆಸಿದ್ದಾನೆ.
ನಗರದ ಆಲೂರು ವೆಂಕಟರಾವ್ ವೃತ್ತದ ಬಳಿ ನೌಕರರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.ಈ ವೇಳೆ ನೌಕರನಾಗಿರುವ ಮಲ್ಲಿಕಾರ್ಜುನ ಗುಮ್ಮಗೋಳ ಎಂಬಾತ ಟವರ್ ಏರಿ ಕುಳಿತಿದ್ದಾನೆ.
ಕೈಯಲ್ಲಿ ಬೇಡಿಕೆ ಫಲಕ ಸಹಿತ ಟವರ್ ಏರಿದ ಮಲ್ಲಿಕಾರ್ಜುನ ಗುಮ್ಮಗೋಳ ಟವರ್ ನ ತುತ್ತ ತುದಿಯಲ್ಲಿ ಕುಳಿತು ಪ್ರದರ್ಶನ ಮಾಡಿದ್ದಾನೆ.ಅಲ್ಲದೆ ಕಳೆದ ಏಳು ತಿಂಗಳಿನಿಂದ ನಮಗೆ ವೇತನ ನೀಡದೆ ಬಾಕಿ ಉಳಿಸಿದ್ದಾರೆ. ಕೂಡಲೇ ಬಾಕಿ ವೇತನ ನೀಡುವಂತೆ ಆಗ್ರಹಿಸಿದ್ದಾನೆ.
ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆತನ ಮನವೋಲಿಸಿ ಟವರ್ನಿಂದ ಕೆಳಗಿಳಿಸಿದ್ದಾರೆ.