ಕೇರಳ; ಚಿಕನ್ ಶವರ್ಮ ತಿಂದ ಬಳಿಕ ಅಸ್ವಸ್ಥನಾಗಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ
ಕಕ್ಕನಾಡ್‌ನ ಮೆವೆಲಿಪುರಂ ಎಂಬಲ್ಲಿರುವ ರೆಸ್ಟೋರೆಂಟ್‌ವೊಂದರಲ್ಲಿ ಚಿಕನ್ ಶವರ್ಮ ತಿಂದಿದ್ದ 22 ವರ್ಷದ ರಾಹುಲ್ ಡಿ.ನಾಯರ್ ಮೃತ ಯುವಕ.
ಕೊಚ್ಚಿನ್‌ನ ವಿಶೇಷ ಆರ್ಥಿಕ ವಲಯಕ್ಕೆ ಸಂಬಂಧಿಸಿದ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ. ಪಾಲದ ನಿವಾಸಿಯಾದ ಈತ ತನ್ನ ಸ್ನೇಹಿತರ ಜೊತೆ ಚಿಟ್ಟೆತುಕರಾದಲ್ಲಿ ನೆಲೆಸಿದ್ದ.
ಅಕ್ಟೋಬರ್ 22 ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆತರಲಾಯಿತು ಮತ್ತು ತಕ್ಷಣವೇ ವೆಂಟಿಲೇಟರ್ ಹಾಕಲಾಯಿತು.ಆದರೆ ಯಾವುದೇ ಚೇತರಿಕೆ ಕಂಡುಬರಲಿಲ್ಲ, ರಕ್ತ ಪರೀಕ್ಷೆಯಲ್ಲಿ ಆಹಾರ ವಿಷವಾಗಿರುವುದು ಧೃಡಪಟ್ಟಿದೆ.
ಆಸ್ಪತ್ರೆಯು ಹೆಚ್ಚಿನ ದೃಢೀಕರಣಕ್ಕಾಗಿ ಅಮೃತಾ ಆಸ್ಪತ್ರೆಯ (ಕೊಚ್ಚಿಯಲ್ಲಿರುವ) ಲ್ಯಾಬ್‌ಗೆ ಮಾದರಿಗಳನ್ನು ಕಳುಹಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರೆಸ್ಟೋರೆಂಟ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸೆಕ್ಷನ್ 284ರ ಅಡಿ ದೂರು ದಾಖಲಾಗಿದೆ.
ಶವರ್ಮಾ ಸೇವಿಸಿ ಜನರ ಆರೋಗ್ಯ ಹದಗೆಟ್ಟ ಹಿನ್ನೆಲೆ ದೂರು ಬಂದಿದ್ದು, ಹೀಗಾಗಿ ಹೊಟೇಲ್‌ನ್ನು ನಗರ ಪಾಲಿಕೆ ಆರೋಗ್ಯಾಧಿಕಾರಿಗಳು ಬಂದ್ ಮಾಡಿಸಿದ್ದಾರೆ.