ಇಲಿ ಕೊಂದ ಆರೋಪದ ಮೇಲೆ ಯುವಕನ ಬಂಧನ? ಏನಿದು ಘಟನೆ?

ಝೈನುಲ್‌ ಅಬ್ದೀನ್‌ (24) ಬಂಧಿತ

ಉತ್ತರಪ್ರದೇಶ;ಇಲಿಯ ಮೇಲೆ ಬೈಕ್‌ ಹಾಯಿಸಿ ಕೊಂದ ಆರೋಪದ ಮೇಲೆ ಪೊಲೀಸರು ಯುವಕನೋರ್ವನಿಗೆ ಬಂಧಿಸಿರುವ ಘಟನೆ ನೊಯ್ದಾದಲ್ಲಿ ನಡೆದಿದೆ.
ಝೈನುಲ್‌ ಅಬ್ದೀನ್‌ (24) ಎಂಬಾತನಿಗೆ ಬಂಧಿಸಲಾಗಿದೆ. ಈತ ಬೈಕ್‌ ಹಾಯಿಸಿ ಇಲಿಯೊಂದನ್ನು ಕೊಂದಿರುವ ಹಳೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ನಂತರ ಇಬ್ಬರು ವ್ಯಕ್ತಿಗಳು ಝೈನುಲ್‌ ನಿವಾಸಕ್ಕೆ ಆಗಮಿಸಿ ಆತನ ಸೋದರನ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.
ಘಟನೆ ಬೆನ್ನಲ್ಲೇ ಆ ಇಬ್ಬರನ್ನೂ ಬಂಧಿಸಲಾಯಿತು. ನಂತರ ತೊಂದರೆ ಸೃಷ್ಟಿಸಿದ ಆರೋಪದ ಮೇಲೆ ಝೈನುಲ್‌ನನ್ನೂ ಬಂಧಿಸಲಾಗಿತ್ತು.

ಸ್ಟಾಲ್‌ ನಡೆಸುತ್ತಿರುವ ಝೈನುಲ್‌ನನ್ನು ಅಲ್ಲಿ ನಡೆದ ಗಲಾಟೆಯೊಂದರ ಸಂಬಂಧ ಬಂಧಿಸಲಾಗಿದೆ ಇಲಿ ಕೊಂದಿದ್ದಕ್ಕೆ ಅಲ್ಲ ಎಂದು ಪೊಲೀಸರು ನಂತರ ಹೇಳಿದ್ದಾರೆ.

ಬಂಧಿತ ಯುವಕನೊಬ್ಬನನ್ನು ಸೋಮವಾರ ಬಿಡುಗಡೆಗೊಳಿಸಲಾಗಿದ್ದು ಈ ಕುರಿತಂತೆ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ಗೌತಮ್‌ ಬುದ್ಧ ನಗರ್‌ ಪೊಲೀಸ್‌ ಆಯುಕ್ತೆ ಲಕ್ಷ್ಮಿ ಸಿಂಗ್‌ ಹೇಳಿದ್ದಾರೆ.
ಟಾಪ್ ನ್ಯೂಸ್