ಮಡಿಕೇರಿಯಲ್ಲಿ ನಾಪತ್ತೆಯಾಗಿದ್ದ ಓರ್ವ ಬಾಲಕಿ ಮಲ್ಪೆ ಬೀಚ್ ನಲ್ಲಿ ನೀರುಪಾಲು, ಮತ್ತೋರ್ವಳ ರಕ್ಷಣೆ

ಉಡುಪಿ;ಮಡಿಕೇರಿ‌ ಮೂಲದ ಇಬ್ಬರು ಯುವತಿಯರು ಮಲ್ಪೆ ಬಳಿ ನೀರು ಪಾಲಾಗಿರುವ ಘಟನೆ ನಡೆದಿದ್ದು, ಓರ್ವ ಯುವತಿ ಮೃತಪಟ್ಟು,ಮತ್ತೋರ್ವರ ರಕ್ಷಣೆ ಮಾಡಿರುವ ಬಗ್ಗೆ ವರದಿಯಾಗಿದೆ.

ಮಡಿಕೇರಿ ಮೂಲದ ಮಾನ್ಯ ಎನ್ನುವ ಯುವತಿ ಸಾವನ್ನಪ್ಪಿದ್ದು,ಯಶಸ್ವಿನಿ ಎಂಬಾಕೆಗೆ ರಕ್ಷಣೆ ಮಾಡಲಾಗಿದೆ.

ತಡರಾತ್ರಿ ಭಾರಿ ಅಲೆಗಳ ಹೊಡೆತಕ್ಕೆ ಇಬ್ಬರು ಯುವತಿಯರು ಸಮುದ್ರ ಪಾಲಾಗಿದ್ದರು ಎಂದು ಹೇಳಲಾಗುತ್ತಿದೆ.ಈ ವೇಳೆ ಓರ್ವ ಯುವತಿಯನ್ನು ಈಶ್ವರ್ ಎಂಬವರು ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.

ಮಡಿಕೇರಿ ಠಾಣೆಯಲ್ಲಿ ಇಬ್ಬರೂ ಕಾಣೆಯಾಗಿರುವ ಕುರಿತು ದೂರು ದಾಖಲಾಗಿತ್ತು.ಆದರೆ ಇದೀಗ ಉಡುಪಿಯ ಮಲ್ಪೆ ಬೀಚ್ ನಲ್ಲಿ ದುರ್ಘಟನೆ ನಡೆದಿರುವುದು ಬಯಲಾಗಿದೆ.

ಟಾಪ್ ನ್ಯೂಸ್