ಸೌದಿ ಅರೇಬಿಯಾ; ರಸ್ತೆ ದಾಟುವಾಗ ವಾಹನ ಢಿಕ್ಕಿ ಹೊಡೆದು ಮಂಗಳೂರಿನ ಯುವಕ ಮೃತ್ಯು; ಏಪ್ರಿಲ್‌ ನಲ್ಲಿ ಊರಿಗೆ ಬರಲು ಸಿದ್ದತೆ ನಡೆಸಿದ್ದ ಯುವಕನ ದಾರುಣ ಅಂತ್ಯ

ಸೌದಿಅರೇಬಿಯಾ;ರಸ್ತೆ ದಾಟುತ್ತಿದ್ದಾಗ ವಾಹನ ಢಿಕ್ಕಿಯಾಗಿ ಮಂಗಳೂರಿನ ಯುವಕ ಮೃತಪಟ್ಟ ಘಟನೆ ಸೌದಿ ಅರೇಬಿಯಾದ ಜುಬೈಲ್ ನಲ್ಲಿ ನಡೆದಿದೆ.

ಮಂಗಳೂರು ಮಲ್ಲೂರು ನಿವಾಸಿ ಸುಲೈಮಾನ್ (35) ಮೃತರು.

ಸುಲೈಮಾನ್ ಜುಬೈಲ್ ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ವಾಹನ ಢಿಕ್ಕಿಯಾಗಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.

ಮಲ್ಲೂರು ಪಲ್ಲಿಬೆಟ್ಟು ಅಬೂಬಕರ್ ಎಂಬವರ ಪುತ್ರ ಸುಲೈಮಾನ್‌ ಅವರು ಜುಬೈಲ್‌ನ ಲುಮಿನಾಸ್ ಕಂಪೆನಿಯ ಉದ್ಯೋಗಿಯಾಗಿದ್ದರು.ಎಪ್ರಿಲ್ 20ರಂದು ಅವರು ಊರಿಗೆ ಬರುವ ಸಿದ್ಧತೆಯಲ್ಲಿದ್ದರು‌ ಎನ್ನಲಾಗಿದ್ದರು.

ಸುಲೈಮಾನ್ ಅವರಿಗೆ ಇಬ್ಬರು ಮಕ್ಕಳಿದ್ದು, ಅಕಾಲಿಕ ನಿಧನದಿಂದ ಕುಟುಂಬದ ರೋಧನ ಮುಗಿಲು ಮುಟ್ಟಿದೆ.

ಟಾಪ್ ನ್ಯೂಸ್