ಕೇರಳ;ಮಲಯಾಳಂ ಚಲನಚಿತ್ರ ನಿರ್ಮಾಪಕ ಮತ್ತು ಚಿತ್ರಕಥೆಗಾರ ಸಿದ್ದಿಕ್ ಅವರು ಸೋಮವಾರ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಾಧ್ಯಮಗಳ ವರದಿ ಪ್ರಕಾರ ಅವರ ಸ್ಥಿತಿ ಚಿಂತಾಜನಕವಾಗಿದೆ.63 ವರ್ಷದ ನಿರ್ದೇಶಕರು ಸದ್ಯ ಕೊಚ್ಚಿಯ ಅಮೃತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿದ್ದಿಕ್ ಈ ಮೊದಲು ನ್ಯುಮೋನಿಯಾ ಮತ್ತು ಯಕೃತ್ತಿನ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿಗಳು ಹೇಳಿವೆ.
ವರದಿಯ ಪ್ರಕಾರ,ಚಲನಚಿತ್ರ ನಿರ್ಮಾಪಕರು ಪ್ರಸ್ತುತ ಎಕ್ಸ್‌ಟ್ರಾಕಾರ್ಪೋರಿಯಲ್ ಮೆಂಬರೇನ್ ಆಕ್ಸಿಜನೇಷನ್ (ECMO) ಯಂತ್ರದ ಮೂಲಕ ಬೆಂಬಲವನ್ನು ಪಡೆಯುತ್ತಿದ್ದಾರೆ.
ಸಿದ್ದಿಕ್ ಅವರು ಮೂರು ದಶಕಗಳಿಂದ ಮಲಯಾಳಂ ಚಲನಚಿತ್ರೋದ್ಯಮದೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ಅವರ ಮನರಂಜನೆ ಮತ್ತು ಕೌಟುಂಬಿಕ ವಿಷಯಗಳಿಗೆ ಹೆಸರುವಾಸಿಯಾದ ಹಲವಾರು ಯಶಸ್ವಿ ಮತ್ತು ಜನಪ್ರಿಯ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಅವರು ರಾಮ್‌ಜಿ ರಾವ್ ಸ್ಪೀಕಿಂಗ್‌ನೊಂದಿಗೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು ಮತ್ತು ಅವರ ಕೆಲವು ಗಮನಾರ್ಹ ಚಿತ್ರಗಳು ಗಾಡ್‌ಫಾದರ್, ಕಾಬೂಲಿವಾಲಾ, ಹಿಟ್ಲರ್, ಫ್ರೆಂಡ್ಸ್, ವಿಯೆಟ್ನಾಂ ಕಾಲೋನಿ, ಬಿಗ್ ಬ್ರದರ್ ಮತ್ತು ಲೇಡೀಸ್ ಮತ್ತು ಜಂಟಲ್‌ಮ್ಯಾನ್ ಸೇರಿ ಹಲವು ಚಿತ್ರಗಳ ನಿರ್ದೇಶನ ಮಾಡಿದ್ದಾರೆ.