ಖ್ಯಾತ ಮಲಯಾಳಂ ನಟ ಬಾಬುರಾಜ್ ಅರೆಸ್ಟ್; ಏನಿದು ಪ್ರಕರಣ?
ಕೊಚ್ಚಿ:ಭೂ ವಂಚನೆ ಪ್ರಕರಣದಲ್ಲಿ ಮಲಯಾಳಂ ನಟ ಬಾಬುರಾಜ್ ಅವರನ್ನು ಬಂಧಿಸಲಾಗಿದೆ.
ಕೇರಳ ಹೈಕೋರ್ಟ್ ನೀಡಿದ ಆದೇಶದ ಮೇರೆಗೆ ಆದಿಮಾಲಿ ಪೊಲೀಸ್ ಠಾಣೆಯಲ್ಲಿ ಬಾಬುರಾಜ್ ಶರಣಾಗಿದ್ದಾರೆ.
ಕಂದಾಯ ಇಲಾಖೆಯ ಕ್ರಮ ಎದುರಿಸುತ್ತಿದ್ದ ಇಡುಕ್ಕಿಯ ಕಲ್ಲಾರ್‌ನಲ್ಲಿರುವ ತಮ್ಮ ರೆಸಾರ್ಟ್ ನ್ನು ಬಾಬುರಾಜ್ ಗುತ್ತಿಗೆಗೆ ನೀಡಿದ್ದರು.
ಹೈಕೋರ್ಟ್ ನಿರ್ದೇಶನದನ್ವಯ ಅವರನ್ನು ಬಂಧಿಸಲಾಗಿತ್ತು. ಇಡುಕ್ಕಿಯ ಸ್ಥಳೀಯ ನ್ಯಾಯಾಲಯದಲ್ಲಿ ಅವರನ್ನು ಹಾಜರುಪಡಿಸಿದ ನಂತರ ಜಾಮೀನಿನ ಮೇಲೆ ಅವರು ಬಿಡುಗಡೆಯಾದರು.
ವಂಚನೆಯ ಪ್ರಕರಣವು ಬಾಬುರಾಜ್ ಅವರ ಇಡುಕ್ಕಿಯಲ್ಲಿನ ರೆಸಾರ್ಟ್‌ಗೆ ಸಂಬಂಧಿಸಿದೆ. ಅವರ ರೆಸಾರ್ಟ್ ಕಂದಾಯ ವಸೂಲಾತಿ ಪ್ರಕ್ರಿಯೆಗೆ ಗುರಿಯಾಗಿದೆ ಎಂಬ ಅಂಶವನ್ನು ಮುಚ್ಚಿಟ್ಟು, ಅದನ್ನು ವ್ಯಕ್ತಿಯೊಬ್ಬರಿಗೆ ಭೋಗ್ಯಕ್ಕೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.