ಮಳವಳ್ಳಿ ಶಾಸಕರು & ಟೋಲ್ ಸಿಬ್ಬಂದಿಯ ವಾಗ್ವಾದದ ವಿಡಿಯೋ ವೈರಲ್..

ಬೆಂಗಳೂರು;ಮಳವಳ್ಳಿ ಕ್ಷೇತ್ರದ ಶಾಸಕ ನರೇಂದ್ರ ಸ್ವಾಮಿ ಹಾಗೂ ಟೋಲ್ ಸಿಬ್ಬಂದಿಯ ವಾಗ್ವಾದದ ವಿಡಿಯೋ ವೈರಲ್ ಆಗಿದೆ.

ಶಾಸಕರ ಕಾರನ್ನು ತಡೆದ ಟೋಲ್‌ ಸಿಬ್ಬಂದಿ ವಿರುದ್ಧ ಶಾಸಕರು ಗರಂ ಆಗಿದ್ದರು.ಇದಕ್ಕೆ ಟೋಲ್ ಸಿಬ್ಬಂದಿ ನಿಮಗೆ ಹೈವೆಯಲ್ಲಿ ಹೋಗೋದಕ್ಕೆ ಬಿಟ್ಟಿಯಾಗಿ ಬಿಡ್ತೀವಿ. ನಾವು ಕಳಿಸಿದಾಗ ಹೋಗಬೇಕು ಎಂದು ಅವಾಜ್‌ ಹಾಕಿದ್ದಾರೆ.

ಬೆಂಗಳೂರು ಹೊರವಲಯದ ಕುಂಬಳಗೋಡು ಬಳಿಯ ಕಣಮಿಣಿಕಿ ಟೋಲ್‌ ಬಳಿ ಈ ವಾಗ್ವಾದ ನಡೆದಿದೆ.ಶಾಸಕರ ಮಾತಿಗೆ ಬಾಯಿ- ಬಾಯಿ ಮಾತನಾಡಿದ ಟೋಲ್ ಸಿಬ್ಬಂದಿ ಗದರಿಸಿಯೇ ಪ್ರತಿಕ್ರಿಯೆ ಕೊಟ್ಟಿದ್ದಾರೆ‌.

ಸಾಮಾನ್ಯವಾಗಿ ಶಾಸಕರಿಗೆ, ಸಚಿವರಿಗೆ ಟೋಲ್ ನಲ್ಲಿ ಉಚಿತ ಪ್ರಯಾಣ ಇರಲಿದೆ.ಕಾರಿನಲ್ಲಿ ಶಾಸಕರ ವಾಹನ ಪಾಸ್ ಇದ್ದರು ತಡೆದು ನಿಲ್ಲಿಸಿದ್ದ ಟೋಲ್ ಸಿಬ್ಬಂದಿಗೆ ಶಾಸಕರು ಪ್ರಶ್ನೆ ಮಾಡಿದ್ದಾರೆ.

ಟೋಲ್ ಸಿಬ್ಬಂದಿ ಹಾಗೂ ಶಾಸಕರ ನಡುವೆ ಕೆಲಕಾಲ ವಾಗ್ವಾದ ನಡೆದಿದೆ. ಪೋಲಿಸರು ಬರಲಿ ಎಂದ ಶಾಸಕ ನರೇಂದ್ರ ಸ್ವಾಮಿ ಹೇಳಿದ್ದಕ್ಕೆ ಯಾವ ಪೋಲಿಸರು ಬೇಕಾದರೆ ಬರಲಿ ಎಂದು ಶಾಸಕರಿಗೆ ಕೈತೋರಿಸಿ ಅವಾಜ್ ಹಾಕಿದ್ದಾನೆ.

ಟೋಲ್ ಸಿಬ್ಬಂದಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಕೂಡ ಕಾರಣವಾಗಿದೆ.

ಟಾಪ್ ನ್ಯೂಸ್