ಮಲಪ್ಪುರಂ;ಚಲಿಸುತ್ತಿದ್ದ ಬೈಕ್ಗೆ ಫುಟ್ಬಾಲ್ ಬಡಿದು ನಿಯಂತ್ರಣ ಕಳೆದುಕೊಂಡು ಬೈಕ್ ಕೆಳಗೆ ಬಿದ್ದ ಪರಿಣಾಮ
ಬೈಕ್ ನಲ್ಲಿದ್ದ ಮಹಿಳೆ ಲಾರಿ ಹರಿದು ಮೃತಪಟ್ಟ ಘಟನೆ
ಕೇರಳದ ಮಲಪ್ಪುರಂ ಜಿಲ್ಲೆಯ ಒಥಾಯಿಯಲ್ಲಿ ನಡೆದಿದೆ.
ಮೃತರನ್ನು ಫಾತಿಮಾ ಸುಹ್ರಾ (38) ಎಂದು ಗುರುತಿಸಲಾಗಿದೆ.ಸುಹ್ರಾ ತನ್ನ ಸಹೋದರ ಮತ್ತು ಮಕ್ಕಳೊಂದಿಗೆ ಅತ್ತೆಯ ಮನೆಗೆ ವಾಪಸ್ ಬರುವಾಗ ಈ ದುರ್ಘಟನೆ ಸಂಭವಿಸಿದೆ.
ಮಕ್ಕಳು ಫುಟ್ಬಾಲ್ ಆಡುವಾಗ ರಸ್ತೆಯಲ್ಲಿ ಬೈಕ್ ಹಾದು ಹೋಗುತ್ತಿತ್ತು.ಮಕ್ಕಳು ಒದ್ದ ಫುಟ್ಬಾಲ್ ಬೈಕ್ಗೆ ಬಡಿದು ಬೈಕ್ ಸವಾರ ನಿಯಂತ್ರಣ ಕಳೆದುಕೊಂಡು ಬೈಕ್ ಕೆಳಗೆ ಬಿದ್ದಿದೆ.ಈ ವೇಳೆ ಹಿಂದೆ ಬರುತ್ತಿದ್ದ ಲಾರಿ, ಫಾತಿಮಾ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.