ಮಲಪ್ಪುರಂ;ಮಾನ್ಯ ಎಂಬ ಯುವತಿಯ ಆತ್ಮಹತ್ಯೆ ಕೇಸ್ ಗೆ ಸಂಬಂಧಿಸಿದಂತೆ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
ಮಾನ್ಯ ಭಾವಿ ಪತಿ ಅಶ್ವಿನ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಥ್ರಿಕ್ಕಾಲಯೂರ್ ಮೂಲದ ಮಾನ್ಯ,ಕಳೆದ ಜೂನ್ನಲ್ಲಿ ಮನೆಯಲ್ಲಿ ನೇಣಿಗೆ ಶರಣಾಗಿದ್ದರು.ಮಾನ್ಯ ಕುಟುಂಬ ದೂರಿನ ಬಳಿಕ ಅರೀಕೋಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಅಶ್ವಿನ್ ಕಿರುಕುಳದಿಂದಲೇ ಮಾನ್ಯ ಮೃತಪಟ್ಟಿರುವುದು ಮೊಬೈಲ್ ತನಿಖೆ ಬಳಿಕ ಪೊಲೀಸರಿಗೆ ತಿಳಿದು ಬಂದಿದೆ.
2021ರ ಸೆಪ್ಟೆಂಬರ್ನಲ್ಲಿ ನಿಶ್ಚಿತಾರ್ಥ ಆಗುವ ಮುನ್ನ ಕಳೆದ 8 ವರ್ಷಗಳಿಂದ ಮಾನ್ಯ ಮತ್ತು ಅಶ್ವಿನ್ ಪ್ರೀತಿಸುತ್ತಿದ್ದರು. ಆ ಬಳಿಕ ಅಶ್ವಿನ್ ವಿದೇಶಕ್ಕೆ ತೆರಳಿದ್ದು,ಇಬ್ಬರ ನಡುವಿನ ಪ್ರೀತಿ ದೂರವಾಗಿತ್ತು.ಇದರಿಂದ ಮನನೊಂದು ಮಾನ್ಯ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.