BREAKING; ಮೆಜೆಸ್ಟಿಕ್ ಬಳಿ ಕಟ್ಟೆ ಬಳಿ ಕುಳಿತಿದ್ದ ಇಬ್ಬರಿಗೆ ಚೂರಿ ಇರಿತ, ಸ್ಥಿತಿ ಗಂಭೀರ

ಬೆಂಗಳೂರು;ಕಟ್ಟೆ ಮೇಲೆ ಕುಳಿತಿದ್ದ ಇಬ್ಬರಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿರುವ ಘಟ‌ನೆ ಮೆಜೆಸ್ಟಿಕ್​ನಲ್ಲಿರುವ ಗಣಪತಿ ದೇವಸ್ಥಾನದ ಬಳಿ ನಡೆದಿದೆ.

ದೇವಸ್ಥಾನದ ಬಳಿ ಇರುವ ಕಟ್ಟೆ ಮೇಲೆ ಇಬ್ಬರು ಸುಮ್ಮನೆ ಕುಳಿತಿದ್ದಾಗ ಮಾನಸಿಕ ಅಸ್ವಸ್ಥನಾಗಿರುವ ಗಣೇಶ ಎಂಬ ವ್ಯಕ್ತಿ ಚಾಕುವಿನಿಂದ ಇರಿದಿದ್ದಾನೆ.ಈ ವೇಳೆ ಬಿಡಿಸಲು ಬಂದ ವ್ಯಕ್ತಿ ಮೇಲೂ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಉಪ್ಪಾರಪೇಟೆ ಠಾಣಾ ಪೊಲೀಸರು ಮೂವರು ಗಾಯಾಳುಗಳನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ‌.ಮೂವರ ಸ್ಥಿತಿ ಕೂಡ ಗಂಭೀರವಾಗಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಎಸಿಪಿ ಕೆ.ಸಿ.ಗಿರಿ ಸೇರಿ ಉಪ್ಪಾರ ಪೇಟೆ ಠಾಣಾ ಉನ್ನತ ಅಧಿಕಾರಿಗಳು ತೆರಳಿ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ ಎಂದು ವರದಿಯಾಗಿದೆ.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರ್ ಪತ್ನಿಗೆ ನಾನು ಕೆಲಸ ಕೊಡುತ್ತೇನೆ, ನಳಿನ್ ಕುಮಾರ್ ರಾಜೀನಾಮೆ ಕೊಡಲಿ- ಪ್ರತಿಭಾ ಕುಳಾಯಿ ಏನೆಲ್ಲಾ ಹೇಳಿದ್ರು?

ಮಂಗಳೂರು:ನಳಿನ್ ಕುಮಾರ್ ಕಟೀಲ್ ವಿರುದ್ಧ ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ವಾಗ್ದಾಳಿ ನಡೆಸಿದ್ದಾರೆ.

Developed by eAppsi.com