ನವದೆಹಲಿ:ಏಷ್ಯನ್ ಅಂಡರ್-21 ಬೆಳ್ಳಿ ಪದಕ ವಿಜೇತ ಪಾಕಿಸ್ತಾನದ ಖ್ಯಾತ ಸ್ನೂಕರ್ ಆಟಗಾರ ಮಜಿದ್ ಅಲಿ ಪಂಜಾಬ್‌ನ ಫೈಸಲಾಬಾದ್ ಬಳಿಯ ತನ್ನ ಹುಟ್ಟೂರಾದ ಸಾಮುಂದ್ರಿಯಲ್ಲಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
28 ವರ್ಷದ ಮಜೀದ್ ತನ್ನ ಆಟದ ದಿನಗಳಿಂದಲೂ ಖಿನ್ನತೆಯೊಂದಿಗೆ ಹೋರಾಡುತ್ತಿದ್ದರು ಮತ್ತು ತನ್ನ ಜೀವನವನ್ನು ಅಂತ್ಯಗೊಳಿಸಲು ಮರ ಕತ್ತರಿಸುವ ಯಂತ್ರವನ್ನು ಬಳಸಿದ್ದಾರೆಂದು ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಮಜೀದ್ ಹಲವಾರು ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದರು ಮತ್ತು ರಾಷ್ಟ್ರೀಯ ಸ್ನೂಕರ್ ಸರ್ಕ್ಯೂಟ್‌ನಲ್ಲಿ ಉನ್ನತ ಶ್ರೇಣಿಯನ್ನು ಪಡೆದಿದ್ದರು.
ಮಜಿದ್ ಅವರ ಸಹೋದರ ಉಮರ್ ಅವರು ತಮ್ಮ ಹದಿಹರೆಯದ ವಯಸ್ಸಿನಿಂದಲೂ ಖಿನ್ನತೆಗೆ ಒಳಗಾಗಿದ್ದರು ಮತ್ತು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.