ದಕ್ಷಿಣಕನ್ನಡ:ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟ ತೀರ್ಪು ಪ್ರಕಟ ಹಿನ್ನಲೆ ಪ್ರಕರಣದಲ್ಲಿ ನ್ಯಾಯಕ್ಕೆ ಹೋರಾಟ ನಡೆಸಿದ್ದ ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಪ್ರತಿಕ್ರಿಯೆ ನೀಡಿದ್ದಾರೆ.
ಸೌಜನ್ಯ ಪ್ರಕರಣದಲ್ಲಿ ನಡೆದ ತನಿಖೆಗಳೆಲ್ಲವೂ ಬೋಗಸ್ , ಅಣ್ಣಪ್ಪ ಇಲ್ಲವಾದರೆ ಮಂಜುನಾಥ ಈ ಕೇಸಿನಲ್ಲಿ ನ್ಯಾಯ ಕೊಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣದಲ್ಲಿ ನಡೆದ ತನಿಖೆಗಳೆಲ್ಲವೂ ಬೋಗಸ್ ಹತ್ತು ವರ್ಷ ಯಾರೋ ಹೇಳಿದ್ರು ಅಂತ ಆರೋಪಿಯನ್ನ ಜೈಲಿಗೆ ಹಾಕಿದ್ರು. 10 ವರ್ಷ ಅವನು ಜೈಲಲ್ಲಿದ್ದ ,ಅವನ ಯವ್ವನ ಗತಿ ಏನಾಯಿತು. ಅವನಿಗೆ ಇನ್ನು ಯಾರು ದಿಕ್ಕು ಅಂತ ಕೇಳೋದು. ಧರ್ಮಸ್ಥಳದವರು ಇಂತವ್ರು ಅಂತ ಹೇಳಿದ್ರೆ ಅವರು ಆರೋಪಿ, ಆದರೆ ಹುಡುಗಿಯ ಮನೆಯವರು ಹೇಳಿದ್ರೆ ಅವರು ಆರೋಪಿಗಳಲ್ಲ, ಈ ದೇಶದ ಸಂವಿಧಾನದಲ್ಲಿ ನಮಗೆ ನ್ಯಾಯ ಸಿಗುವುದಿಲ್ಲ . ನಮ್ಮತ್ರ ದುಡ್ಡಿಲ್ಲ ,ನಮ್ಮತ್ರ ರಾಜಕೀಯ ಶಕ್ತಿಗಳಿಲ್ಲ . ಆದರೆ ನಮ್ಮ ಮನಸ್ಸಲ್ಲಿ ಆ ಬಡಪಾಯಿ ಹುಡುಗ ಹೊರಗಡೆ ಬರಲಿ ಅಂತ ಇತ್ತು ಎಂದು ತಿಮರೋಡಿ ಹೇಳಿದ್ದಾರೆ. ಅವನು ಕೃತ್ಯ ನಡೆಸಿಲ್ಲ ಎಂದು ನಾವು ಮೊದಲೇ ಹೇಳಿದ್ದೇವೆ ಎಂದು ಹೇಳಿದ್ದಾರೆ.
ನಾನು ಕೈಯಾರೆ 3.5 ಲಕ್ಷ ಖರ್ಚು ಮಾಡಿ ಆತನನ್ನ ಬಿಡಿಸಿಕೊಂಡು ಬಂದಿದ್ದೆ. ಯಾಕೆಂದರೆ ಆತ ತಪ್ಪು ಮಾಡಿಲ್ಲವೆಂದು ನನಗೆ ತಿಳಿದಿತ್ತು. ಹಾಗಾದರೆ ತಪ್ಪು ಮಾಡಿದವರು ಯಾರು ..? ಸಂತೋಷ್ ಆರೋಪಿಯಲ್ಲ ಎಂದರೆ ನಮಗೆ ಸಂತೋಷದ ಸುದ್ದಿ. ಹಾಗಾದರೆ ಆರೋಪಿಗಳು ಯಾರು ..? ಎಂದು ಪ್ರಶ್ನಿಸಿದರು.
ನಮ್ಮ ಮೇಲೆ ಹಾಕಿದ ಕೇಸುಗಳು ಇನ್ನೂ ಬಾಕಿಯಿದೆ .ಎಲ್ಲಿ ನ್ಯಾಯ ಸಿಗುತ್ತೆ ನಮಗೆ ,ಇನ್ನೂ ದಾಖಲೆ ಮಾಡಲು ಸಾಧ್ಯವಿಲ್ಲ ಎಂದರು.
ಸೌಜನ್ಯಳ ಕೊಲೆ ಗುಡ್ಡೆಯಲ್ಲಿ ನಡೆದಿಲ್ಲ, ಎಲ್ಲೋ ರೇಪ್ & ಮರ್ಡರ್ ಮಾಡಿ ತಂದು ಹಾಕಿದ್ದಾರೆ.ಮೊದಲ ದಿನ ಗುಂಪು ಆ ಪ್ರದೇಶದಲ್ಲಿ ಬಾಲಕಿಗೆ ಹುಡುಕಾಟ ನಡೆಸಿತ್ತು.ಆಗ ಸಿಗಲಿಲ್ಲ ಮರುದಿನ ಅದೇ ಸ್ಥಳದಲ್ಲಿ ಮೃತದೇಹ ಸಿಕ್ಕಿದೆ.
ಸೌಜನ್ಯಳ ಗುಪ್ತಾಂಗಕ್ಕೆ ಮಣ್ಣು ತುರುಕಿಸಲಾಗಿತ್ತು.ದೇಹದ ಇಡೀ ಕಚ್ಚಿ ಗಾಯಗೊಳಿಸಲಾಗಿತ್ತು.ಇದನ್ನು ಯಾಕೆ ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯರು ಉಲ್ಲೆಖಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಆಕೆಯ ಬಟ್ಟೆ ಸಿಗಲಿಲ್ಲ. ಮನೆಯವರು ಇಂತವರೇ ಕೊಲೆ ಮಾಡಿದ್ದಾರೆ ಎಂದರೆ ಯಾರೂ ಕೇಳಲಿಲ್ಲ.ಆದರೆ ಅದರ ಇಂದಿನ ಪ್ರಬಾವಿ ಯಾರು ನಮಗೆ ಗೊತ್ತಿದೆ.ಪ್ರತಿಯೊಬ್ಬ ಪೊಲೀಸರಿಗು ಗೊತ್ತಿದೆ ಆದರೆ ಯಾಕೆ ಅವರನ್ನು ಬಂಧಿಸಿಲ್ಲ.ಅವರು ಅಷ್ಟು ಪ್ರಭಾವಿಯ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ, ಸಚಿವರ ಮೇಲೆ ರೇಪ್ ಕೇಸ್ ಆಗುತ್ತದೆ ಇವರ ಮೇಲೆ ಯಾಕೆ ಆಗಿಲ್ಲ.ಗೆದ್ದವರ ಬಾಲ ಹಿಡಿದ ಕಾರಣವೇ ಎಂದು ಅವರು ಪ್ರಶ್ನಿಸಿದ್ದಾರೆ.