ಮಡಿಕೇರಿ; ಭೀಕರ ಅಪಘಾತ ಇಬ್ಬರು ಯುವಕರು ಮೃತ್ಯು, ರಾತ್ರಿ ಅಪಘಾತವಾಗಿರುವುದು ಬೆಳಿಗ್ಗಿನವರೆಗೆ ತಿಳಿದೇ ಇಲ್ಲ!

ಮಡಿಕೇರಿ: ಬೈಕ್ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೆ ಮೃತಪಟ್ಟ ಘಟನೆ ಕೊಡಗು ಜಿಲ್ಲೆ ಸುಂಟಿಕೊಪ್ಪ ಸಮೀಪದ ಬಿರ್ಚಿ ವುಡ್ ರೆಸಾರ್ಟ್ ಸಮೀಪದಲ್ಲಿ ನಡೆದಿದೆ.

ಉದಯ(25) ಹಾಗೂ ಚಂದನ್(26) ಮೃತ ದುರ್ಧೈವಿಗಳು.ಇಬ್ಬರೂ ಸುಂಟಿಕೊಪ್ಪದ ಮದುರಮ ಬಡಾವಣೆ ನಿವಾಸಿಗಳು.

ರಾತ್ರಿ ಘಟನೆ ನಡೆದಿದ್ದರೂ ನಿರ್ಜನ ಪ್ರದೇಶವಾದ್ದರಿಂದ ಬೆಳಗಿನವರೆಗೂ ಯಾರ ಗಮನಕ್ಕೂ ಬಂದಿರಲಿಲ್ಲ.

ಬೈಕ್‌ ಲೈಟ್ ಕಂಬಕ್ಕೆ ಡಿಕ್ಕಿಯಾಗಿ ಬೈಕ್‌ನಿಂದ ಬಿದ್ದು ಸವಾರರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಧಾರಾಕಾರವಾಗಿ ಮಳೆ ಬರುತ್ತಿದ್ದುದರಿಂದ ದಾರಿ ಕಾಣದೆ ಅಥವಾ ಸ್ಕಿಡ್‌ ಆಗಿ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ನಿನ್ನೆ ರಾತ್ರಿ ಕುಶಾಲನಗರದಿಂದ ಸುಂಟಿಕೊಪ್ಪಕ್ಕೆ ಬರುವಾಗ ಅಪಘಾತ ನಡೆದಿದ್ದು, ಮುಂಜಾನೆ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಟಾಪ್ ನ್ಯೂಸ್